ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಕೆಒಎಚ್‌ಎ–ಎಲ್‌ಐಎಸ್‌ಎ: ವರ್ಕಿಂಗ್ ಯೂಸರ್ ಮ್ಯಾನುಯಲ್’ ಎಂಬ ಪುಸ್ತಕವನ್ನು ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಕರ್ನಾಟಕ ಕಾನೂನು ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ. ಭಂಡಾರೆ, ಜಿಐಟಿ ಆಡಳಿತ ಮಂಡಳಿ ಸದಸ್ಯ ಎಸ್.ವಿ. ಗಣಾಚಾರಿ ಮತ್ತು ಪ್ರಾಂಶುಪಾಲ ಡಾ.ಜಯಂತ ಕೆ. ಕಿತ್ತೂರ ಈಚೆಗೆ ಬಿಡುಗಡೆ ಮಾಡಿದರು.

ಪುಸ್ತಕವನ್ನು ಬೆಂಗಳೂರಿನ ಎಲ್ಐಎಸ್ ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವಿ. ಕೊಣ್ಣೂರ ಅವರ ಮುನ್ನುಡಿ ಟಿಪ್ಪಣಿಯೊಂದಿಗೆ ಪ್ರಕಟಿಸಲಾಗಿದೆ. ರವಿ ಒಡೆಯರ, ಬಸವರಾಜ ಎಸ್. ಕುಂಬಾರ ಮತ್ತು ಅರುಣ ಅದ್ರಕಟ್ಟಿ ಸಂಕಲನ ಮಾಡಿದ್ದಾರೆ. ಕೆಒಎಚ್‌ಎ ತಂತ್ರಾಂಶದ ಅನುಷ್ಠಾನದ ಬಗ್ಗೆ ಹಂತ ಹಂತದ ಜ್ಞಾನ ಪಡೆಯುವ ಎಲ್ಲಾ ಬಳಕೆದಾರರು, ಗ್ರಂಥಾಲಯ ವೃತ್ತಿಪರರು ಮತ್ತು ಗ್ರಂಥಾಲಯ ವಿಜ್ಞಾನ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ. ಬಸವರಾಜ ಕುಂಬಾರ ಅವರು ಕೆಎಲ್ಎಸ್ ಜಿಐಟಿಯ ಗ್ರಂಥಪಾಲಕರಾಗಿದ್ದು, ಅವರು ‘ಕೆಒಎಚ್‌ಎ’ ಅನುಷ್ಠಾನಗೊಳಿಸಲು ವಿವಿಧ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ ಹಾಗೂ ವಿವಿಧ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ತಜ್ಞರಾಗಿ ಭೇಟಿ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.