ಬೆಳಗಾವಿ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರಾಚಾರ್ಯ, ಪ್ರಾಧ್ಯಾಪಕರು, ಸಿಬ್ಬಂದಿ ಸ್ವಂತ ಹಣದಲ್ಲಿ ಸಮವಸ್ತ್ರದ ಬಟ್ಟೆ ಕೊಡಿಸಿದ್ದಾರೆ.

ಕಾಲೇಜಿನಲ್ಲಿ 628 ವಿದ್ಯಾರ್ಥಿನಿಯರು ಬಿ.ಎ, ಬಿ.ಕಾಂ ಕೋರ್ಸ್ ಓದುತ್ತಾರೆ. ಅವರಲ್ಲಿ ಬಿ.ಎ, ಬಿ.ಕಾಂ ಪ್ರಥಮವರ್ಷದ 210 ವಿದ್ಯಾರ್ಥಿನಿಯರಿಗೆ ಸಮವಸ್ತ್ರದ ಬಟ್ಟೆ ವಿತರಿಸಲಾಗಿದೆ.

₹1.10 ಲಕ್ಷ ವೆಚ್ಚ: ‘ಪ್ರಾಚಾರ್ಯರು, 12 ಪ್ರಾಧ್ಯಾಪಕರು, ಐವರು ಬೋಧಕೇತರ ಸಿಬ್ಬಂದಿ ₹1.10 ಲಕ್ಷ ಸಂಗ್ರಹಿಸಿ, ವಿದ್ಯಾರ್ಥಿನಿಯರಿಗೆ ತಲಾ 2 ಜೊತೆ ಚೂಡಿದಾರ ಬಟ್ಟೆ ಕೊಟ್ಟಿದ್ದೇವೆ’ ಎಂದು ಪ್ರಾಧ್ಯಾಪಕ ರಮೇಶ ಮಾಂಗಳೇಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ವಿದ್ಯಾರ್ಥಿನಿಯರಲ್ಲಿ ಹಲವರು ಬಡ, ಮಧ್ಯಮ ವರ್ಗದವರು. ಪ್ರತಿ ವರ್ಷ ಸಮವಸ್ತ್ರ ಖರೀದಿಸಲು ಅವರಿಗೆ ಸಂಕಷ್ಟ. ಹೀಗಾಗಿ ಈ ಕ್ರಮ ಕೈಗೊಂಡೆವು' ಎಂದರು.

‘ಸ್ಥಳೀಯವಾಗಿ ಖರೀದಿಸಿದರೆ, ಹೆಚ್ಚು ಹಣ ಖರ್ಚು ಮಾಡಬೇಕಿತ್ತು. ಅದಕ್ಕೆ ನಾವೇ ಗುಜರಾತ್ನ ಸೂರತ್ಗೆ ಹೋಗಿ, ಕಡಿಮೆ ದರದಲ್ಲೇ ಗುಣಮಟ್ಟದ ಬಟ್ಟೆಗೆ ಆರ್ಡರ್ ಮಾಡಿದೆವು. ತಲಾ 10 ಮೀಟರ್ (ತಲಾ ಐದು ಮೀಟರ್ ಟಾಪ್, ಪ್ಯಾಂಟ್) ಬಟ್ಟೆ ಸಿಗುತ್ತದೆ. ಹೊಲಿಗೆ ಖರ್ಚು ವಿದ್ಯಾರ್ಥಿನಿಯರೇ ಭರಿಸುವರು’ ಎಂದರು.

ವಿದ್ಯಾರ್ಥಿನಿಯರಿಗೆ ಅನುಕೂಲವಾಗಿದೆ. ಉಳಿತಾಯದ ಹಣವನ್ನು ಕಲಿಕಾ ಚಟುವಟಿಕೆಗೆ ಬಳಸುವರು. ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಲು ಅಳಿಲುಸೇವೆ ಮಾಡಿದ್ದೇವೆ.

–ಎನ್.ಆರ್.ಪಾಟೀಲ ಪ್ರಾಚಾರ್ಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು

ಹಲವು ಸಂಕಷ್ಟದ ಮಧ್ಯೆಯೂ ಓದು ಮುಂದುವರಿಸಿದ್ದೇವೆ. ಕಾಲೇಜಿನ ಸಿಬ್ಬಂದಿ ಸಮವಸ್ತ್ರದ ಬಟ್ಟೆ ಕೊಡಿಸಿದ್ದರಿಂದ ಒಂದಿಷ್ಟು ಹಣ ಉಳಿದಿದೆ. ಅದನ್ನು ಕಲಿಕೆಗೆ ಬಳಸುತ್ತೇವೆ.

–ರೇಷ್ಮಾ ಲಮಾಣಿ ರೇಣುಕಾ ನಾಯ್ಕ ಹೊಳೆವ್ವ ನಾಯ್ಕ ವಿದ್ಯಾರ್ಥಿನಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.