ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

CT Ravi ಮಾನಹಾನಿ ಹೇಳಿಕೆ: ಯಾರು ಏನೆಂದರು?

Published : 19 ಡಿಸೆಂಬರ್ 2024, 16:30 IST
Last Updated : 19 ಡಿಸೆಂಬರ್ 2024, 16:30 IST
ಫಾಲೋ ಮಾಡಿ
Comments
ರವಿ ಅವರು ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ‘ಪ್ರಾಸ್ಟಿಟ್ಯೂಟ್‌ ಪದ ಬಳಸಿದರು. ಇದು ದೇಶದ ಮಹಿಳೆಯರಿಗೆ ಮಾಡಿದ ಅಪಮಾನ. ಅಂಥವರನ್ನು ಸದನದಿಂದ ಹೊರಹಾಕಬೇಕು
ಉಮಾಶ್ರೀ, ಕಾಂಗ್ರೆಸ್‌ ಸದಸ್ಯೆ
ಇಂತಹ ಮಾತುಗಳನ್ನು ಸದನದಲ್ಲಿ ಕೇಳಿಸಿಕೊಳ್ಳಲೂ ಅಸಹ್ಯವಾಗುತ್ತದೆ. ರಾಹುಲ್‌ ಗಾಂಧಿ ಅವರನ್ನು ಸಿ.ಟಿ. ರವಿ ಡ್ರಗ್ಗಿಸ್ಟ್ ಅಂತಿದ್ದರಿಂದ ಲಕ್ಷ್ಮೀ ಅವರು, ರವಿ ಅವರನ್ನು ಕೊಲೆಗಡುಕ ಎಂದರು. ಅದಕ್ಕೆ ಅಂತಹ ಕೀಳು ಪದ ಬಳಕೆ ಮಾಡಿದರು
ಬಲ್ಕೀಸ್‌ ಬಾನು, ಕಾಂಗ್ರೆಸ್‌ ಸದಸ್ಯೆ
ಲಕ್ಷ್ಮೀ ಹೆಬ್ಬಾಳಕರ ಅವರು ಸಿ.ಟಿ. ರವಿಗೆ ಕೊಲೆಗಾರ ಎನ್ನುವ ಪದ ಬಳಕೆ ಮಾಡುತ್ತಾರೆ. ಆಗ ರವಿ ಕೂಡಾ ಲಕ್ಷ್ಮೀ ಹೆಬ್ಬಾಳಕರಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ
ನಾಗರಾಜ್ ಯಾದವ್, ಕಾಂಗ್ರೆಸ್‌ ಸದಸ್ಯ
ಸಭಾಪತಿ ಕಲಾಪವನ್ನು 10 ನಿಮಿಷ ಮುಂದೂಡಿದರು. ಆಗ ಕೊಲೆಗಡುಕ, ಡ್ರಗ್ಗಿಸ್ಟ್ ಪದ ಬಂತು. ಯಾವುದೇ ಅಶ್ಲೀಲ ಪದ ಬಳಕೆ ನನ್ನ ಗಮನಕ್ಕೆ ಬಂದಿಲ್ಲ
ಟಿ.ಎ. ಶರವಣ, ಜೆಡಿಎಸ್‌ ಸದಸ್ಯ
ಸುವರ್ಣಸೌಧದ ಒಳಗೇ ಹಲ್ಲೆ ನಡೆಸಲು ಯತ್ನಿಸಿರುವುದು ಗಂಬೀರ ಲೋಪ. ಆವರಣದಲ್ಲೇ ಭದ್ರತೆ ಇಲ್ಲ ಎಂದಾದರೆ, ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ ಎನ್ನುವುದನ್ನು ಗ್ರಹಿಸಬಹುದು
ಡಿ.ಎಸ್‌. ಅರುಣ್‌, ಬಿಜೆಪಿ ಸದಸ್ಯ
ಸಿ.ಟಿ. ರವಿ ಕೀಳು ಅಭಿರುಚಿಯ ಪದ ಬಳಸಿಲ್ಲ, ಕಾಂಗ್ರೆಸ್‌ ವಿಷಯಾಂತರ ಮಾಡಲು ಯಾವಾಗಲೂ ಇಂತಹ ತಂತ್ರ ಅನುಸರಿಸುತ್ತದೆ
ಎನ್‌. ರವಿ ಕುಮಾರ್, ಬಿಜೆಪಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT