ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌: ಹೊನ್ನಪ್ಪಗೆ ಬೆಳ್ಳಿ ಪದಕ

Published 24 ಜನವರಿ 2024, 13:30 IST
Last Updated 24 ಜನವರಿ 2024, 13:30 IST
ಅಕ್ಷರ ಗಾತ್ರ

ರಾಮದುರ್ಗ: ತಾಲ್ಲೂಕಿನ ಚಂದರಗಿಯ ಎಸ್.ಎಂ. ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯ ಸೈಕ್ಲಿಂಗ್‌ ಕ್ರೀಡಾಪಟುಗಳು ವಿಜಯಪುರದಲ್ಲಿ ಜರುಗಿದ 28ನೇ ರಾಷ್ಟ್ರಮಟ್ಟದ ರೋಡ್‌ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟದಲ್ಲಿ ಹೊನ್ನಪ್ಪ ಧರ್ಮಟ್ಟಿ 14 ವಯೋಮಿತಿಯ ಬಾಲಕರ ವಿಭಾಗದ 20 ಕಿ.ಮೀ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಯಲ್ಲೆಶ ಹುಡೆದ 16 ವಯೋಮಿತಿಯ 30 ಕಿ.ಮೀ ವೈಯಕ್ತಿಕ ಸ್ಪರ್ಧೆಯಲ್ಲಿ ಹಾಗು 40 ಕಿ.ಮೀ ಗುಂಪು ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ರಾಘವೇಂದ್ರ ವಂದಾಲ 18 ವಯೋಮಿತಿಯ 40 ಕಿ.ಮೀ. ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಅನಿಲ ಕಾಳಪ್ಪಗೋಳ ಪುರುಷರ ವಿಭಾಗದಲ್ಲಿ 60 ಕಿ.ಮೀ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT