ಬೆಳಗಾವಿ: ‘ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಅಭಿವೃದ್ಧಿ ಎನ್ನುವುದು ಹುಡುಕಿದರೂ ಕಾಣುತ್ತಿರಲಿಲ್ಲ. ಈಗ ಅಭಿವೃದ್ಧಿಯಾಗದ ಗ್ರಾಮ ಕಾಣುತ್ತಿಲ್ಲ. ಪ್ರತಿ ಗ್ರಾಮಕ್ಕೂ ಒಂದಿಲ್ಲೊಂದು ಯೋಜನೆ ತಂದಿದ್ದೇನೆ. ಕೇವಲ 3 ವರ್ಷದಲ್ಲಿ ಚಿತ್ರಣವೇ ಬದಲಾಗಿದೆ. ಇದಕ್ಕೆ ಕ್ಷೇತ್ರದ ಜನರ ಸಹಕಾರ, ಪ್ರೀತಿ, ವಿಶ್ವಾಸವೇ ಕಾರಣ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಕ್ಷೇತ್ರದ ಸಾವಗಾಂವ ಗ್ರಾಮದಲ್ಲಿ 2019-20ನೇ ಸಾಲಿನ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ₹ 21 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಸಂಕಲ್ಪವಾಗಿದೆ. ಜನರ ಋಣ ತೀರಿಸುವುದು ನನ್ನ ಕರ್ತವ್ಯ. ಅಭಿವೃದ್ಧಿಗೆ ಕೊನೆ ಎನ್ನುವುದಿಲ್ಲ. ಹಾಗಾಗಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ’ ಎಂದರು.

ಎನ್.ಕೆ. ಪಾಟೀಲ, ಮಾಯಪ್ಪ ಗಾಟಿಗಸ್ತಿ, ಗಣಪತಿ ಪಾಟೀಲ, ವೈ.ಎಂ. ಪಾಟೀಲ, ಗೀತಾ ಸಾವಗಾಂವ್ಕರ, ಸಂಗೀತಾ ಬಣಕಾರ, ಕಲ್ಲಪ್ಪ ಪಾಟೀಲ, ಲಕ್ಷ್ಮಿ ಸುತಾರ, ಬಾಳು ಪಾಟೀಲ, ಕೃಷ್ಣ, ನಿತಾಜಿ ಮುಲಗಿ, ಭುಜಂಗ ಮುಲಗಿ, ಲಕ್ಷ್ಮಣ ಕದಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.