ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿ ಜೀವರಾಶಿಯಲ್ಲೂ ದೇವರ ಕಾಣಿ’

Last Updated 3 ಅಕ್ಟೋಬರ್ 2022, 13:51 IST
ಅಕ್ಷರ ಗಾತ್ರ

ರಾಯಬಾಗ: ಭಕ್ತಿಯು ಕೇವಲ ತೋರಿಕೆಗೆ ಸೀಮಿತವಾಗದೇ ಪ್ರತಿಯೊಂದು ಜೀವರಾಶಿಯಲ್ಲೂ ದೇವರನ್ನು ಕಾಣುವಂತಾಗಬೇಕು. ಮನುಷ್ಯ ಮೌಢ್ಯತೆಗೆ ಒಳಗಾಗದೆ ಶ್ರದ್ಧೆಯಿಂದ ದೇವರನ್ನು ಪೂಜಿಸಬೇಕು ಎಂದು ತಮಿಳುನಾಡಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆಗಿರುವ ಶಂಭು ಕಲ್ಲೋಳಿಕರ ಹೇಳಿದರು.

ಪಟ್ಟಣದ ಶಿವಪ್ರೇಮಿ ನವರಾತ್ರಿ ಉತ್ಸವ ಕಮಿಟಿಯ 25ನೇ ವಾರ್ಷಿಕೋತ್ಸವ ಅಂಗವಾಗಿ ಕಲ್ಲೋಳಿಕರ ಪ್ರತಿಷ್ಠಾನ ಹಾಗೂ ಆದರ್ಶ ಗ್ರೂಪ್–ಸವದತ್ತಿ ಆಶ್ರಯದಲ್ಲಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಕೋಲಾಟ ಸ್ಪರ್ಧೆಯಲ್ಲಿ ಮಾತನಾಡಿದರು.

ಈರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಾಬುರಾವ್ ಬಂಡಗರ, ಮುರುಗೇಶ ಕೋಟಿವಾಲೆ, ವಿನಯ ಚೌಗಲೆ, ಕಾರ್ತಿಕ ಶಿರಹಟ್ಟಿ, ಶಿವು ಬಂತೆ, ಸಿದ್ದು ದೇಸಾಯಿ, ಅಪ್ಪು ಪವಾರ, ಜಿನ್ನಪ್ಪ ಬಡೋರೆ, ಏಕನಾಥ ಪೂಜೇರಿ,ಬಸವರಾಜ ಖಿಚಡೆ ಇದ್ದರು.

ರಂಗೋಲಿಯಲ್ಲಿ ಅರಳಿದ ದುರ್ಗಾ ಮಾತೆ: ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಮಹಿಳೆಯರಿಗಾಗಿ ಉತ್ಸವ ಕಮಿಟಿ ವತಿಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕೆಲ ಮಹಿಳೆಯರು ರಂಗೋಲಿಯಲ್ಲಿ ದುರ್ಗಾ ಮಾತೆಯ ಚಿತ್ರ ಬಿಡಿಸಿ ಭಕ್ತಿ ಪ್ರದರ್ಶಿಸಿದರು.

ಪೂಜಾ ಗಡ್ಡೆ (ಪ್ರಥಮ), ರಾಧಿಕಾ ಪಾಟೀಲ (ದ್ವಿತೀಯ) ಮತ್ತು ದ್ರಾಕ್ಷಾಯಣಿ ಬಳ್ಳಾರಿ (ತೃತೀಯ) ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT