ಚನ್ನಮ್ಮನ ಕಿತ್ತೂರು: ಯೂರಿಯಾ ರಸಗೊಬ್ಬರಕ್ಕಾಗಿ ಹಂಗಾಮಿನಲ್ಲಿ ರೈತರನ್ನು ಸತಾಯಿಸುವ ಅಂಗಡಿಕಾರರು ಈಗಿನಿಂದಲೇ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ.

ಮಾರಾಟ ಮಾಡುವ ಅಂಗಡಿಯಲ್ಲಿ ಅಥವಾ ಅಂಗಡಿ ಸಮೀಪ ಇರುವ ಗೋದಾಮಿನಲ್ಲಿ ದಾಸ್ತಾನು ಮಾಡದೆ ಚನ್ನಮ್ಮನ ಕಿತ್ತೂರಿನ ಪಿಕೆಪಿಎಸ್ ಗೋದಾಮಿನಲ್ಲಿ ರಸಗೊಬ್ಬರ ಸಂಗ್ರಹ ಮಾಡಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿರುವುದು ಅಕ್ರಮಕ್ಕೆ ಹೆಚ್ಚು ಪುಷ್ಟಿ ನೀಡುವಂತಿದೆ ಎನ್ನುತ್ತಾರೆ ಅವರು.

ರಸಗೊಬ್ಬರ ಬೇರೆ ಕಡೆಗೆ ದಾಸ್ತಾನು ಮಾಡಿರುವ ಆಗ್ರೋ ಕೇಂದ್ರದ ಮಾಲೀಕನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಉತ್ತರ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು
ಮಂಜುನಾಥ ಕೆಂಚರಾಹುತ್, ಅಧಿಕಾರಿ, ರೈತಸಂಪರ್ಕ ಕೇಂದ್ರ ಚನ್ನಮ್ಮನ ಕಿತ್ತೂರು

ಸೊಸೈಟಿ ಮೂಲಕ ಸಾಗಾಟ ಮಾಡುತ್ತಿದ್ದರು ಎನ್ನಲಾದ ಲಾರಿಯನ್ನು ರೈತರು ಮಂಗಳವಾರ ಮಧ್ಯಾಹ್ನ ಹಿಡಿದಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಅಂಗಡಿ ಮಾಲೀಕ ಸಮಜಾಯಿಸಿ ನೀಡಲು ಹೋದರು. ಇದಕ್ಕೆ ರೈತರು ಒಪ್ಪಲಿಲ್ಲ. ಸ್ಥಳಕ್ಕೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ ಕೆಂಚರಾಹುತ್ ಅವರನ್ನು ಕರೆಸಲಾಯಿತು.

ಅಂಗಡಿ ಬಿಟ್ಟು ಬೇರೆ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದು ತಪ್ಪು. ಈ ಬಗ್ಗೆ ಅಂಗಡಿ ಮಾಲೀಕನಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ರಸಗೊಬ್ಬರ ಅಗತ್ಯವಿದ್ದ ರೈತರಿಗೆ ವಿತರಿಸಲು ಸೂಚಿಸಲಾಗುವುದು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.