ಬೆಳಗಾವಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಜನ ಕುಳಿತುಕೊಳ್ಳುವ ಸಲುವಾಗಿ ಕಾಲೇಜು ರಸ್ತೆಯಲ್ಲಿ ವೀಕ್ಷಣಾ ಗ್ಯಾಲರಿ ನಿರ್ಮಿಸಲಾಯಿತು
ಪಾಲಿಕೆಯಿಂದಲೂ ಸಕಲ ಸಿದ್ಧತೆ
ನಗರದಲ್ಲಿ 11 ದಿನಗಳ ಕಾಲ ‘ವಿಘ್ನ ನಿವಾರಕ’ನನ್ನು ಪ್ರತಿಷ್ಠಾಪಿಸಿ ಪೂಜಿಸಿದ ಬೆಳಗಾವಿಗರು ಶನಿವಾರ (ಸೆ.6) ಭಕ್ತಿಯ ವಿದಾಯ ಹೇಳಲು ಸಜ್ಜಾಗಿದ್ದಾರೆ. ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಹಾನಗರ ಪಾಲಿಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಬೆಳಗಾವಿ ನಗರ ಮತ್ತು ಉಪನಗರ ವ್ಯಾಪ್ತಿಯಲ್ಲಿ 378 ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಂಡಿವೆ. ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡ ಹಳೆಯ ಹೊಂಡ ಇಂದ್ರಪ್ರಸ್ಥ ನಗರದ ಜಕ್ಕೇರಿ ಹೊಂಡ ಹಳೆಯ ಬೆಳಗಾವಿಯ ಕಲ್ಮೇಶ್ವರ ಕೆರೆ ಮಜಗಾವಿಯ ಬ್ರಹ್ಮದೇವ ದೇವಾಲಯದ ಬಳಿ ಅನಗೋಳದ ಲಾಲ್ ತಲಾವ್ ಕೋಟೆ ಕೆರೆ ಕಣಬರ್ಗಿ ಕೆರೆಯಲ್ಲಿ ಅವುಗಳ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.