ಗೋಕಾಕ: ಗೋಕಾಕ ನೂತನ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಇಲ್ಲಿನ ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆ ಇಂಟೆಕ್ ರಾಷ್ಟ್ರೀಯ ಮಜದೂರ್ ಯೂನಿಯನ್ ಸಂಘಟನೆಯವರು ಬುಧವಾರ ನಗರದ ಬಸವೇಶ್ವರ ವೃತ್ತದಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡರು.

ಪಾದಯಾತ್ರೆಗೆ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಚಾಲನೆ ನೀಡಿದರು.

ಗೋಕಾಕ ನೂತನ ಜಿಲ್ಲೆಯನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿರುವ ಇಂಟೆಕ್ ಸಂಘಟನೆ ಪದಾಧಿಕಾರಿಗಳು ಗುರುವಾರ ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದಾರೆ.

ಇಂಟೆಕ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶಬ್ಬೀರ ಮುಜಾವರ, ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮೈನು ಅಂಡಗಿ, ಮಹಿಳಾ ಅಧ್ಯಕ್ಷೆ ಸಂಗೀತಾ ಕಾಂಬ್ಳೆ , ಶಾರದಾ ಹೊನ್ನಕುಪ್ಪಿ, ಅನ್ನಪೂರ್ಣ ಮುನ್ನೋಳಿ, ಮೈಬೂಬ ಮತ್ತೆ, ಮುಸ್ತಾಕ ಅಂಡಗಿ, ಮದಾರ ಪಟೇಲ್, ಸುಬಾನಿ ಮಕಾನದಾರ, ಮಂಜುಳಾ ನಿಜಲಿಂಗಪ್ಪಗೋಳ, ನ್ಯಾಮತ ಶೇಖ್ ಇಮ್ತಿಯಾಜ ಮೋಮಿನ, ನಸರುಲ್ಲಾ ಚವ್ಹಾಣ, ದಾದಾಪೀರ ಅಥಣಿ, ಮಾರುತಿ ಜೋಗಿರಾಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.