ಮೂಡಲಗಿ: ತಾಲ್ಲೂಕಿನ ನಾಗನೂರದಲ್ಲಿ ಜರುಗಿದ ಶಿಕ್ಷಣ ಇಲಾಖೆಯ ವಿಭಾಗ ಮಟ್ಟದ ಕೊಕ್ಕೊ ಟೂರ್ನಿಯ 14 ವರ್ಷದ ಒಳಗಿನ ಬಾಲಕರ ಮತ್ತು 17 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ಒಟ್ಟು ಮೂರು ವಿಭಾಗದಲ್ಲಿ ಚಿಕ್ಕೋಡಿಯ ತಂಡಗಳು ಚಾಂಪಿಯನಷಿಪ್ ಪಡೆದುಕೊಂಡು ಟೂರ್ನಿಯಲ್ಲಿ ಪಾರುಪತ್ಯವನ್ನು ಸಾಧಿಸಿತು.

14 ವರ್ಷದ ಒಳಗಿನ ಬಾಲಕಿಯರ ವಿಬಾಗದಲ್ಲಿ ವಿಜಯಪುರ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿತು. 14 ವರ್ಷದ ಒಳಗಿನ ರಾಜ್ಯ ಮಟ್ಟದ ಕೊಕ್ಕೊ ಟೂರ್ನಿಯ ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗದಲ್ಲಿ ಬೆಳಗಾವಿ ತಂಡವು ಚಾಂಪಿಯನಷಿಪ್ ಗಿಟ್ಟಿಸಿ ರಾಷ್ಟ್ರ ಮಟ್ಟದ ಕೊಕ್ಕೊ ಟೂರ್ನಿಗೆ ಅರ್ಹತೆ ಪಡೆದುಕೊಂಡವು.

ಫಲಿತಾಂಶ: ವಿಭಾಗ ಮಟ್ಟದ 14 ವರ್ಷ ಒಳಗಿನ ಬಾಲಕರ ವಿಭಾಗ: ಚಿಕ್ಕೋಡಿ (ಪ್ರಥಮ), ಬೆಳಗಾವಿ (ದ್ವಿತೀಯ)

ಬಾಲಕಿಯರ ವಿಭಾಗ: ವಿಜಯಪುರ (ಪ್ರಥಮ), ಬಾಗಲಕೋಟೆ (ದ್ವಿತೀಯ)

ವಿಭಾಗ ಮಟ್ಟದ 17ವರ್ಷದ ಒಳಗಿನ ಬಾಲಕರ ವಿಭಾಗ: ಚಿಕ್ಕೋಡಿ (ಪ್ರಥಮ), ಧಾರವಾಡ (ದ್ವಿತೀಯ)

ಬಾಲಕಿಯರ ವಿಭಾಗ: ಚಿಕ್ಕೋಡಿ (ಪ್ರಥಮ), ಹಾವೇರಿ (ದ್ವಿತೀಯ).

ರಾಜ್ಯ ಮಟ್ಟದ 14 ವರ್ಷದ ಒಳಗಿನ ಬಾಲಕರು: ಬೆಳಗಾವಿ (ಪ್ರಥಮ), ಬೆಂಗಳೂರು (ದ್ವಿತೀಯ)

ಬಾಲಕಿಯರು: ಬೆಳಗಾವಿ (ಪ್ರಥಮ), ಬೆಂಗಳೂರು (ದ್ವಿತೀಯ) ಸ್ಥಾನ ಪಡೆದುಕೊಂಡವು.

ರಾಜ್ಯ ಮಟ್ಟದ ಟೂರ್ನಿಯಲ್ಲಿ ಬೆಳಗಾವಿ, ಬೆಂಗಳೂರು, ಮೈಸೂರು, ಕಲಬುರ್ಗಿ ವಿಭಾಗಗಳಿಂದ ಬಾಲಕ, ಬಾಲಕಿಯರ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಎರಡು ದಿನಗಳ ವರೆಗೆ ಜರುಗಿದ ಕೊಕ್ಕೊ ಟೂರ್ನಿಯಲ್ಲಿ 400ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿ ಜಿದ್ದಾಜಿದ್ದಿ ಆಡಿ ಪ್ರೇಕ್ಷಕರಿಗೆ ದೇಶಿ ಆಟದ ಸೊಗಡನ್ನು ತೋರಿಸಿದರು.

ಬಹುಮಾನ ವಿತರಣೆ: ಬಹುಮಾನಗಳನ್ನು ವಿತರಿಸಿದ ಕರ್ನಾಟಕ ರಾಜ್ಯ ಕೊಕ್ಕೊ ಅಸೋಸಿಯೇಶನ್ ಉಪಾಧ್ಯಕ್ಷ ಜಯರಾಮ ಮಾತನಾಡಿ ‘ನಾಗನೂರದಲ್ಲಿ ಕೊಕ್ಕೊ ಟೂರ್ನಿಯನ್ನು ಶಿಸ್ತುಬದ್ಧವಾಗಿ ಆಯೋಜಿಸಿದ್ದು, ಇದು ಇತರರಿಗೆ ಮಾದರಿಯಾಗಿದೆ’ ಎಂದರು.

ಸುರೇಶ ಡಿ, ಎಸ್.ಕೆ. ರಾಜು, ಕೆ.ಎಸ್. ಹನುಮಂತ, ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ, ಪ್ರಭಾ ಶುಗರ್ ನಿರ್ದೇಶಕ ಕೆಂಚನಗೌಡ ಪಾಟೀಲ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಸಪ್ಪ ಬಬಲಿ, ಮಲ್ಲಪ್ಪ ಹೊಸಮನಿ, ಸುರೇಶ ಸಕ್ಕರೆಪ್ಪಗೋಳ, ಬೆಳಗಾವಿ ಕೊಕ್ಕೊ ಅಸೋಸಿಯೇಷನ ಜಿಲ್ಲಾಧ್ಯಕ್ಷ ಗಜಾನನ ಯರಗಣವಿ, ಚಿಕ್ಕೋಡಿ ಜಿಲ್ಲಾ ಡಿಪಿಓ ಜುನೇದಿ ಪಟೇಲ , ಟಿಪಿಓ ಎಸ್ ಬಿ ಹಳಿಗೌಡರ, ಮುಖ್ಯ ಶಿಕ್ಷಕ ಎಸ್ ಬಿ ಕೇದಾರಿ, ಈರಣ್ಣ ಹಳಿಗೌಡರ, ಸಿ. ಆರ್. ಪೂಜಾರಿ, ಸಿ.ಎಸ್. ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.