ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಐಟಿ: ‘ಟೆಕ್ನೋವೇಶನ್’ ಪ್ರದರ್ಶನ

Last Updated 7 ಏಪ್ರಿಲ್ 2022, 9:07 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‌ಎಸ್–ಜಿಐಟಿಯಲ್ಲಿ ಬುಧವಾರ ‘ಟೆಕ್ನೋವೇಶನ್’ ಪ್ರಾಜೆಕ್ಟ್ ಎಕ್ಸ್‌ಪೊ (ಯೋಜನೆಗಳ ಪ್ರದರ್ಶನ) ಆಯೋಜಿಸಲಾಗಿತ್ತು.

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಬೆಂಬಲಿಸುವ ಪಠ್ಯಕ್ರಮ ರೂಪಿಸುವುದು ಮತ್ತು ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಲು ಆಯೋಜಿಸಿದ್ದ ಈ ‘ತಂತ್ರಜ್ಞ’ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೊದಲ ವರ್ಷದ 45 ಎಂಜಿನಿಯರಿಂಗ್‌ ವಿದ್ಯಾರ್ಥಿ ತಂಡಗಳು ವಿನೂತನ ಯೋಜನೆಗಳನ್ನು ಮತ್ತು ಐಡಿಯಾಗಳನ್ನು ಪ್ರಸ್ತುತಪಡಿಸಿದರು. ಮಿನಿಯೇಚರ್ ರಡಾರ್, ಅಡುಗೆ ಅನಿಲ ಸಿಲಿಂಡರ್ ಸೋರಿಕೆ ಪತ್ತೆ ಹಚ್ಚುವುದು, ಮಿನಿಯೇಚರ್ ಹೋವರ್‌ಕ್ರಾಫ್ಟ್, ಕೃಷಿ ಆಧಾರಿತ ಪಿಕ್ ಮತ್ತು ಪ್ಲೇಸ್ ಆರ್ಮ್ ರೊಬೋಟ್‌ಗಳು ಮೊದಲಾದವುಗಳ ಪ್ರಾತ್ಯಕ್ಷಿಕೆ ನೀಡಿದರು.

ಎಚ್‌ಯುವಿ, ಕೋಚ್‌ಎಡ್ ಸಹ-ಸಂಸ್ಥಾಪಕ ಸಿಇಒ ಅನಿಕೇತನ್, ವಿಪಿ ಎಂಜಿನಿಯರಿಂಗ್ ವಾಯವ್ಯ ಲ್ಯಾಬ್ಸ್ ಸಹ-ಸಂಸ್ಥಾಪಕಿ ಉಮಾ ಬೊಂಡಾಡ, ರೆಪ್ಯೂಟ್ಸ್ ಬಿಸಿನೆಸ್ ಸಲ್ಯೂಷನ್ ನಿರ್ದೇಶಕ ಸುಪ್ರೀತ್ ದೀಕ್ಷಿತ್, ಇ ಮತ್ತು ಸಿ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಸರಾಫ್, ಮೆಕ್ಯಾನಿಕಲ್‌ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ವಿ.ಎಸ್. ಮಜಾಲಿ, ಅಧ್ಯಾಪಕ ಡಾ.ಸುನೀಲ್ ಎಫ್.ರಾಡ್ ತೀರ್ಪುಗಾರರಾಗಿದ್ದರು.

ವಿದ್ಯಾರ್ಥಿಗಳಾದ ಆಕಾಶ್ ಪಾಟೀಲ್, ರಮ್ಯಾ ಬೈಟ್ಕೇರಿ, ಸೈತರುಣ್ ಡಿ., ದರ್ಶನ್ ಎಸ್. ಅವರ ‘ಮಿನಿಯೇಚರ್ ರಡಾರ್’, ಸುಮೀತ್ ಕೆ., ಅಭಿಷೇಕ್ ಎಂ., ನವೀನ್ ರಡ್ಡಿ ಅವರ ‘ಸ್ಮಾರ್ಟ್ ಬ್ಲೈಂಡ್ ಸ್ಟಿಕ್ ಯೂಸಿಂಗ್ ಆರ್ಡುನೋ’ ಮತ್ತು ರಾಧಿಕಾ ಜಿ., ಐತಾಳ್ ಎಸ್., ಅಜೀತ್ ಆರ್., ಸಚಿನ್ ಪಿ., ತನಿಷ್ ಕೆ. ಅವರ ‘ಪಿಕ್ ಅಂಡ್ ಪ್ಲೇಸ್ ರೊಬೊಟ್’– ಇವು ಮೂರು ಅತ್ಯುತ್ತಮ ಯೋಜನೆಗಳೆಂದು ಬಹುಮಾನವನ್ನು ಗಳಿಸಿದವು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಎಸ್ ಜಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ‘ನಾವೀನ್ಯತೆಯ ಕಲ್ಪನೆಯು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸುತ್ತದೆ. ವೃತ್ತಿಪರ ಜೀವನದಲ್ಲಿ ಸಹಕಾರಿ ಆಗುತ್ತದೆ’ ಎಂದರು.

ಡಾ.ಎಂ.ಎಸ್. ಪಾಟೀಲ್ ಇದ್ದರು. ಪ್ರಾಂಶುಪಾಲ ಡಾ.ಜಯಂತ್ ಕೆ.ಕಿತ್ತೂರ್ ಸ್ವಾಗತಿಸಿದರು. ಪ್ರೊ.ಮಹೇಶ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಪ್ರಜಕ್ತಾ ಪಾಟೀಲ ಮತ್ತು ಪ್ರೊ.ಸ್ನೇಹಾ ನರಗುಂದಕರ ನಿರೂಪಿಸಿದರು. ಪ್ರೊ.ಶ್ರೀವತ್ಸ ಪೇರೂರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT