ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ | ₹8,810 ಕೋಟಿ ಅನುದಾನ ತಂದ ಅಣ್ಣಾಸಾಹೇಬ ಜೊಲ್ಲೆ: ಶಾಸಕಿ ಶಶಿಕಲಾ

Published 20 ಏಪ್ರಿಲ್ 2024, 15:33 IST
Last Updated 20 ಏಪ್ರಿಲ್ 2024, 15:33 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಸರ್ಕಾರದ ಯಾವೊಂದು ಯೋಜನೆಗಳಿಂದ ಫಲಾನುಭವಿಗಳು ವಂಚಿತ ಆಗಬಾರದು. ಹಾಗಾಗಿಯೇ ಕಳೆದ ಐದು ವರ್ಷಗಳಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ₹8,810 ಕೋಟಿ ಅನುದಾನವನ್ನು ತಂದು ಫಲಾನುಭವಿಗಳಿಗೆ ತಲುಪಿಸಿದ್ದಾರೆ’ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದೆ ಕೂಡ ಇಂತಹ ಹತ್ತು ಹಲವು ಯೋಜನೆಗಳು ತಮ್ಮ ಮನೆ ಬಾಗಿಲಿಗೆ ಬರಬೇಕಾದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಿಕೊಂಡು ಬನ್ನಿ’ ಎಂದು ಕರೆ ನೀಡಿದರು.

ಮುಖಂಡರಾದ ಆಶಿಷ್ ಹುಕ್ಕೇರಿ, ಶಿವಲಿಂಗ ಐನಾಪೂರೆ, ಕಾಶಿಬಾಯಿ ಸಾತ್ವಾರ, ಬಾಲಚಂದ್ರ ಸಾತ್ವಾರ, ಬೈರು ಸಾತ್ವಾರ, ಶಂಕರ ಜೊಲ್ಲೆ, ಧನಪಾಲ ಮಾಳಿ ಸೇರಿದಂತೆ ಬೂತ್ ಮಟ್ಟದ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT