ರಾಮದುರ್ಗ: ಜುಲೈ 8 ರಂದು ರಾಮದುರ್ಗ ತಾಲ್ಲೂಕಿನ ಹರ್ಲಾಪೂರದಿಂದ ರಾಮಾಪೂರಕ್ಕೆ ಹೋಗುವ ಮಾರ್ಗದಲ್ಲಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ರಾಮದುರ್ಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ವ್ಯಕ್ತಿಯನ್ನು ಯುವಕನನ್ನು ಧಾರವಾಡ ಜಿಲ್ಲೆ ಅಮ್ಮಿನಭಾಂವಿ ಗ್ರಾಮದ ಈರಪ್ಪ ಯಲ್ಲಪ್ಪ ಆಡಿನ ಎಂದು ಗುರುತಿಸಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ಖಾನಪೇಟೆ ಗ್ರಾಮದ ಸಾಬಣ್ಣ ಲಕ್ಷ್ಮಣ ಮಾದರ, ಫಕೀರಪ್ಪ ಸೋಮಪ್ಪ ಕಣವಿ ಮತ್ತು ಅಮ್ಮಿನಭಾಂವಿಯ ಕರೆವ್ವ ಕಮಲವ್ವ ಈರಪ್ಪ ಆಡಿನ ಎಂಬುವವರನ್ನು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಲಾಗಿದೆ.

ಘಟನೆ ವಿವರ: ಕೊಲೆಯಾದ ಈರಪ್ಪ ಯಲ್ಲಪ್ಪ ಆಡಿನ ಅವರ ಪತ್ನಿ ಕರೆವ್ವ ಕಮಲವ್ವ ಆಡಿನ ಮತ್ತು ಖಾನಪೇಟೆ ಗ್ರಾಮದ ಫಕೀರಪ್ಪ ಸೋಮಪ್ಪ ಕಣವಿ ಅನೈತಿಕ ಸಂಬಂಧ ಇತ್ತು. ಅವರು ಮೊಬೈಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಫಕೀರಪ್ಪ ಆಗಾಗ ಅಮ್ಮಿನಭಾಂವಿಗೆ ಹೋಗಿ ಬರುತ್ತಿದ್ದ ಎನ್ನುವುದನ್ನು ಮೊಬೈಲ್ ಕರೆ ದಾಖಲೆಗಳ ಮೇಲೆ ವಿಚಾರಣೆ ನಡೆಸಿದ್ದರು.

ಅನೈತಿಕ ಸಂಬಂಧಕ್ಕೆ ಅಡೆತಡೆಯಾಗಿದ್ದ ಈರಪ್ಪ ಎಂಬುವವನ್ನು ಆತನ ಪತ್ನಿ ಕರೆವ್ವ, ಪ್ರಿಯಕರ ಫಕೀರಪ್ಪ ಮತ್ತು ಸಹಚರ ಸಾಬಣ್ಣ ಮಾದರ ಸೇರಿ ಅಮ್ಮಿನಭಾಂವಿಯಿಂದ ಕರೆ ತಂದು ಕುತ್ತಿಗೆಗೆ ಟವೆಲ್ನಿಂದ ಉಸಿರುಗಟ್ಟಿಸಿ, ಕಲ್ಲಿನ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.

ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ಪಿಎಸ್ಐ ಸವಿತಾ ಮುನ್ಯಾಳ, ಎಎಸ್ಐ ಎಲ್.ಟಿ. ಪವಾರ, ವೈ.ಟಿ. ಕೋಟಿ, ಎಸ್.ಎಸ್. ಚೌದರಿ, ಎಸ್.ಎಂ. ಜಾಧವ, ವಿನೋದ ಟಕ್ಕನ್ನವರ, ಸಚಿನ್ ಪಾಟೀಲ ಒಳಗೊಂಡ ತಂಡ ಆರೋಪಿಗಳ ಬಂಧನದಲ್ಲಿ ಹೆಚ್ಚು ಶ್ರಮ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.