ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಕ್ಕೇರಿ: ‘ಕಬಡ್ಡಿ ಪಂದ್ಯಾವಳಿಗೆ ಉತ್ತಮ ಸ್ಪಂದನೆ’

Published 3 ಜನವರಿ 2024, 15:45 IST
Last Updated 3 ಜನವರಿ 2024, 15:45 IST
ಅಕ್ಷರ ಗಾತ್ರ

ಹುಕ್ಕೇರಿ: ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗೆ ವೇದಿಕೆ ನಿರ್ಮಿಸಿ, ಅವರ ಪ್ರತಿಭೆ ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಅವಕಾಶ ಕಲ್ಪಿಸಲು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ‘ಎಂ.ಪಿ.ಟ್ರೋಫಿ ಭವ್ಯ ಕಬಡ್ಡಿ ಪಂದ್ಯಾವಳಿ ಏರ್ಪಡಿಸಿದೆ ಎಂದು ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಉಪಾಧ್ಯಕ್ಷ ಬಸವಪ್ರಸಾದ್ ಜೊಲ್ಲೆ ಹೇಳಿದರು.

ಸ್ಥಳೀಯ ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ನಡೆಯಲಿರುವ ಎರಡು ದಿನದ ಹೊನಲು ಬೆಳಕಿನ ಪಂದ್ಯಾವಳಿ ಬುಧವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ಷೇತ್ರದ 12 ಮಹಿಳಾ ತಂಡ ಸೇರಿ ಒಟ್ಟು 80 ತಂಡಗಳು ಭಾಗವಹಿಸಿವೆ. ಗುರುವಾರ ಬೆಳಿಗ್ಗೆಯಿಂದ ಮಹಿಳಾ ತಂಡದ ಪಂದ್ಯಾವಳಿ ಮುಗಿದಿದೆ. ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪುರಸಭೆ ಸದಸ್ಯರಾದ ಮಹಾವೀರ ನಿಲಜಗಿ, ಸಂಕೇಶ್ವರದ ಸದಸ್ಯ ಪ್ರಮೋದ ಹೊಸಮನಿ ಮಾತನಾಡಿದರು.

ಚಂದ್ರಸೇಖರ್ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಮತ್ತು ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿದರು.

ಬಹುಮಾನ: ₹21 ಸಾವಿರ ಪ್ರಥಮ, ₹15 ಸಾವಿರ ದ್ವಿತೀಯ, ₹7,500 ತೃತೀಯ ಮತ್ತು ₹7,500 ನಾಲ್ಕನೇ ನಗದು ಬಹುಮಾನ ಮತ್ತು ಟ್ರೋಫಿ ಹಾಗೂ ಪ್ರಮಾಣಪತ್ರ ವಿಜೇತ ತಂಡಗಳಿಗೆ ನೀಡಲಾಗುವುದು.

ಸಿಬಿಎಸ್ಇ ಎಸ್.ಕೆ.ಪಬ್ಲಿಕ್ ಸ್ಕೂಲ್ ಚೇರ್ಮನ್ ಪಿಂಟು ಶೆಟ್ಟಿ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಸದಸ್ಯ ರಾಜು ಮುನ್ನೋಳಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ಮುಖಂಡರಾದ ಜಯಗೌಡ ಪಾಟೀಲ, ಅಣ್ಣು ಶೆಟ್ಟಿ, ವಕೀಲ ಬಿ.ಕೆ.ಮಗೆನ್ನವರ, ಪವನ್ ಪಾಟೀಲ, ಕಾರ್ಯದರ್ಶಿ ಎಸ್.ಜಿ.ನದಾಫ್, ಪ್ರಜ್ವಲ್ ನಿಲಜಗಿ, ಚಿದಾನಂದ ಕಿಲ್ಲೇದಾರ್ ಮಹಾವೀರ ಬಾಗಿ ಇದ್ದರು. ಗೋಪಾಲ ಚನಗೌಡ ಸ್ವಾಗತಿಸಿದರು. ರಮೇಶ್ ಪಾಟೀಲ ನಿರೂಪಿಸಿದರು. ಮಹಾವೀರ ಬಾಗಿ ವಂದಿಸಿದರು.

ಹುಕ್ಕೇರಿಯಲ್ಲಿ ಆರಂಭಗೊಂಡಿರುವ ಎಂ.ಪಿ.ಟ್ರೋಫಿ ಕಬಡ್ಡಿ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳ ಆಟದ ಮನಮೋಹಕ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT