ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ನಲ್ಲಿ ಮೃಣಾಲ್ ಬೆಳಗಾವಿಯ ಧ್ವನಿಯಾಗಲಿದ್ದಾನೆ: ಸಚಿವೆ ಲಕ್ಷ್ಮಿ

Published 31 ಮಾರ್ಚ್ 2024, 16:10 IST
Last Updated 31 ಮಾರ್ಚ್ 2024, 16:10 IST
ಅಕ್ಷರ ಗಾತ್ರ

ಹಿರೇಬಾಗೇವಾಡಿ: ‘ಜನರ ಕಷ್ಟ ಸುಖಗಳ ಬಗ್ಗೆ ಅರಿವಿರುವ ಮೃಣಾಲ್ ಹೆಬ್ಬಾಳಕರ, ಕ್ಷೇತ್ರದ ಅಭಿವೃದ್ಧಿಗೆ ತನ್ನದೇ ಆದ ಕನಸು ಕಟ್ಟಿಕೊಂಡಿದ್ದಾನೆ. ಬೆಳಗಾವಿ ಧ್ವನಿಯಾಗಿ ಸಂಸತ್‌ನಲ್ಲಿ ಕೆಲಸ ಮಾಡಲಿದ್ದಾನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಇಲ್ಲಿಗೆ ಸಮೀಪದ ಗಜಪತಿ, ಬಡಸ್ ಕೆ.ಎಚ್., ಕುಕಡೊಳ್ಳಿ, ಬೆಂಡಿಗೇರಿ, ನಾಗೇರಹಾಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಶನಿವಾರ ಮತಯಾಚಿಸಿದ ಅವರು, ‘ನೀವೆಲ್ಲ ಆಶೀರ್ವಾದ ಮಾಡಿ ಅವನನ್ನು ಸಂಸತ್‌ಗೆ ಕಳುಹಿಸಿಕೊಡಿ’ ಎಂದು ವಿನಂತಿಸಿಕೊಂಡರು.

ಮನೆ ಮಗ ಬೇಕೋ, ಹೊರಗಿನವರೋ?: ಹುಬ್ಬಳ್ಳಿ–ಧಾರವಾಡ ಜನರಿಂದ ತಿರಸ್ಕಾರಕ್ಕೊಳಗಾಗಿ, ಹಾವೇರಿಯಿಂದ ಟಿಕೆಟ್ ಸಿಗದೆ ಇದೀಗ ಬೆಳಗಾವಿಗೆ ವಲಸೆ ಬಂದಿರುವ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಬೇಕೋ, ನಿಮ್ಮ ಮನೆ ಮಗ ಮೃಣಾಲ್ ಬೇಕೋ ಎಂದು ನೀವೇ ನಿರ್ಧರಿಸಿ ಎಂದು ಸಚಿವರು ಹೇಳಿದರು.

ಮೃಣಾಲ್ ಹೆಬ್ಬಾಳಕರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಸ್ಥಳೀಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT