ಬುಧವಾರ, ಜನವರಿ 22, 2020
20 °C

ರಂಗಕಲೆ ಪುನಶ್ಚೇತನಗೊಳ್ಳಲಿ: ಗವಿಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಿರಿವಂತ ರಂಗ ಪರಂಪರೆಯುಳ್ಳ ಜಿಲ್ಲೆಯಲ್ಲಿ ಅತಿ ಹೆಚ್ಚು ನಾಟಕಗಳು ಪ್ರದರ್ಶನಗೊಳ್ಳಬೇಕು. ಅದಕ್ಕಾಗಿ ಕಲಾವಿದರೂ ಆಸಕ್ತಿ ತೋರಬೇಕು’ ಎಂದು ಲೇಖಕ ಬಿ.ಎಸ್. ಗವಿಮಠ ಹೇಳಿದರು.

ಇಲ್ಲಿಯ ಪದ್ಮಶ್ರೀ ಚಿಂದೋಡಿಲೀಲಾ ರಂಗಮಂದಿರದಲ್ಲಿ ಸೋಮವಾರ ಯುನೈಟೆಡ್ ಸಮಾಜ ಕ್ಷೇಮಾಭಿವೃದ್ಧಿ ಸಂಘ, ದಾನೇಶ್ವರಿ ಸೇವಾ ಸಂಘ, ಸೇವಕ ಸಂಘ, ಕರ್ನಾಟಕ ರಂಗಭೂಮಿ ಸಹಕಾರಿ ಸಂಘ, ಮುನೀಶ್ವರ ಮೋಟರ್ಸ್‌ ಮತ್ತು ವಿನುತ ಶ್ರೇಯ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಮೈಸೂರು ರಂಗಾಯಣದ ಸಂಚಾರಿ ರಂಗ ಘಟಕದ ಮೂರು ದಿನಗಳ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚಲನಚಿತ್ರಗಳ ಹಾವಳಿಂದ ನಾಡಿನ ಸಂಸ್ಕೃತಿ ಎತ್ತಿಹಿಡಿಯುವ ನಾಟಕಗಳು ಕಣ್ಮರೆಯಾಗುತ್ತಿವೆ. ಹೀಗಾಗಿ, ಜನಪದ ರಂಗಕಲೆಯು ಪುನಶ್ಚೇತನಗೊಳ್ಳಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಜಪಾನಿನ ಬುರ್ನಾಖು ಬೊಂಬೆಯಾಟದ ನಾಟಕ ‘ರೆಕ್ಸ್ ಅವರ್ಸ್’ ಮಾದರಿಯ ಪ್ರಯೋಗವನ್ನು ಮಕ್ಕಳು ಕಣ್ಮನ ತುಂಬಿಕೊಂಡರು.

ಬಾಸೂರು ತಿಪ್ಪೇಸ್ವಾಮಿ, ರಾಜೇಂದ್ರ ದೇಸಾಯಿ, ಆನಂದ ಲೋಬೊ, ಲಿಂಗರಾಜ ಜಗಜಂಪಿ, ಡಾ.ಪ್ರಕಾಶ ಗರುಡ ಮತ್ತು ಡಾ.ಡಿ.ಎಸ್. ಚೌಗಲೆ, ಪ್ರೊ.ದೇಮಣ್ಣ ಸೊಗಲದ ಇದ್ದರು.

ಬಳಿಕ ಗಿರೀಶ್ ಕಾರ್ನಾಡರ ನಾಟಕ ‘ಬೆಂದ ಕಾಳೂರು ಆನ್ ಟೋಸ್ಟ್’ ನಾಟಕ ಪ್ರಯೋಗ ಕಂಡಿತು.

ಪ್ರತಿಕ್ರಿಯಿಸಿ (+)