ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ತೊಂದರೆ ಆಗದಿರಲಿ: ಶಾಸಕ ಮಹಾದೇವಪ್ಪ ಯಾದವಾಡ

ರಾಮದುರ್ಗ ಸಾರಿಗೆ ಘಟಕದಲ್ಲಿ ಸಭೆ
Last Updated 6 ಅಕ್ಟೋಬರ್ 2021, 4:42 IST
ಅಕ್ಷರ ಗಾತ್ರ

ರಾಮದುರ್ಗ: ಜನಸಾಮಾನ್ಯರ, ವಿದ್ಯಾರ್ಥಿಗಳ ಪ್ರಯಾಣಕ್ಕೆ ಅಡೆತಡೆಯಾಗದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್‌ಗಳನ್ನು ಓಡಿಸಬೇಕು. ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಜನಸ್ನೇಹಿಯಾಗಲು ಯತ್ನಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಮಂಗಳವಾರ ರಾಮದುರ್ಗ ಸಾರಿಗೆ ಘಟಕದಲ್ಲಿ ಅಧಿಕಾರಿಗಳ ಹಾಗೂ ಸಾರಿಗೆ ಸಿಬ್ಬಂದಿ ಸಭೆ ನಡೆಸಿದ ಅವರು, ಕೆಲವೆಡೆ ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ. ಘಟಕ ವ್ಯವಸ್ಥಾಪಕರಿಗೆ ಸಂಪರ್ಕಿಸಿದರೆ ಸಮರ್ಪಕ ಮಾಹಿತಿ ನೀಡದೆ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಾರೆ. ಜನರ ಸಮಸ್ಯೆಗೆ ಸ್ಪಂದಿಸುವ ಅಧಿಕಾರಿಗಳ ಸೇವೆ ಇಲ್ಲಿ ಅಗತ್ಯವಿದೆ ಎಂದು ಹೇಳಿದರು.

ಸಾರಿಗೆ ಸಂಸ್ಥೆಯ ವಾಹನಗಳಾಗಲಿ, ಕೆಲಸವಾಗಲಿ ನೌಕರರ
ಅಗತ್ಯಕ್ಕೆ ತಕ್ಕಂತೆ ಮಾಡದೇ ಜನರ ಅಗತ್ಯಕ್ಕೆ ಪರಿವರ್ತನೆ ಮಾಡುವ ಮೂಲಕ ಜನ ಸೇವೆ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಸಂಸ್ಥೆಯ ಕೆಲಸಗಳಿದ್ದರೆ ಸಾರಿಗೆ ಸಚಿವರ ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸುವ ಭರವಸೆ ನೀಡಿದರು.

ಬೆಳಗಾವಿ ವಿಭಾಗದ ಸಾರಿಗೆ ನಿಯಂತ್ರಣಾಧಿಕಾರಿ ವಿ.ಕೆ. ನಾಯ್ಕ ಮಾತನಾಡಿ, ರಾಜ್ಯದ ಸಾರಿಗೆ ಸಂಸ್ಥೆ ಉತ್ತಮ ಸೇವೆ
ನೀಡುವುದರಲ್ಲಿ ಕಳೆದ 50 ವರ್ಷದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಏಳು ವರ್ಷಗಳಿಂದ ಪ್ರಯಾಣ ದರವನ್ನು ಏರಿಕೆ ಮಾಡಿಲ್ಲ. ಆದರೆ ಡಿಸೇಲ್‌ ದರ ಮಾತ್ರ ಶತಕದತ್ತ ತಲುಪುತ್ತಿದೆ. ಇದರಿಂದ ಇಲಾಖೆ ಸಂಕಷ್ಟದಲ್ಲಿದೆ ಎಂದು ಹೇಳಿದರು.

ಜನರ ಸೇವೆಗಾಗಿ ಸಾರಿಗೆ ಸಂಸ್ಥೆ ಕಾರ್ಯ ನಿರ್ವಹಿಸಲಿದೆ. ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಅಗತ್ಯ ಸೇವೆ ನೀಡುವ ಉದ್ಧೇಶದಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತದವರಿಗೆ ಪಿಂಚಣಿ, ಪಿಎಫ್ ಹಣ ನೀಡಲು ಸಾಧ್ಯವಾಗದೇ ಸಾಲಕ್ಕೆ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರದಿಂದ ವಿದ್ಯಾರ್ಥಿ ಬಸ್ ಪಾಸ್‍ನ ಹಣ ಸರಿಯಾಗಿ ಬರುತ್ತಿಲ್ಲ. ಸರ್ಕಾರ ಸಾರಿಗೆ ಸಂಸ್ಥೆಯ ಬಗ್ಗೆ ಕರುಣೆ ತೋರಿಸುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಪಕ್ಕದ ರಾಜ್ಯಗಳಲ್ಲಿ ಸಾರಿಗೆ ನಿಗಮಗಳಿಗೆ ನೀಡುವ ಸೌಲಭ್ಯಗಳನ್ನು ರಾಜ್ಯದ ಸಾರಿಗೆ ನಿಗಮದ ಸಿಬ್ಬಂದಿಗೆ ನೀಡಿದರೆ ಇನ್ನಷ್ಟು ಗುಣಮಟ್ಟದ ಸೇವೆ ನೀಡಲು ಸಹಕಾರಿಯಾಗಲಿದೆ. ಸಾರಿಗೆ ಸಂಸ್ಥೆಗಳ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಎಲ್ಲರೂ ಸರಿಯಾಗಿ ಸೇವೆ ನೀಡಿದರೆ ಒಳ್ಳೆಯ ಸೇವೆ ನೀಡಲು ಸಾಧ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿ ಕೆ.ಕೆ. ಲಮಾಣಿ, ವಿಭಾಗೀಯ ತಾಂತ್ರಿಕ ಅಧಿಕಾರಿ ರಾಧಾಕೃಷ್ಣ, ಘಟಕ ವ್ಯವಸ್ಥಾಪಕ ವಿ.ಜಿ. ಹೊಸಮನಿ ಇದ್ದರು.

ಮುಂಚಿನಂತೆ ರಾಮದುರ್ಗ-ಬೆಂಗಳೂರು ನಾನ್ ಎಸಿ ಸ್ಲೀಪರ್ ಬಸ್ ಪುನಃ ಪ್ರಾರಂಭಕ್ಕೆ ಶಾಸಕ ಮಹಾದೇವಪ್ಪ ಯಾದವಾಡ ಚಾಲನೆ ನೀಡಿದರು. ದಿನಾಲೂ ರಾತ್ರಿ 8ಕ್ಕೆ ರಾಮದುರ್ಗದಿಂದ ಬೆಂಗಳೂರಿಗೆ ತೆರಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT