ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ರಾಮದುರ್ಗ | ರೈಲು ವಿಚಾರದಲ್ಲಿ ರೀಲು ಬಿಡಬೇಡಿ: ರಾಜ್ಯ ರೈಲ್ವೆ ಹೋರಾಟ ಸಮಿತಿ

ರೈಲು ಮಾರ್ಗಕ್ಕಾಗಿ 2 ದಶಕ ಹೋರಾಟ, ಮತ್ತೊಮ್ಮೆ ಸಮೀಕ್ಷೆಗೆ ಆದೇಶ ಪಡೆಯುವಲ್ಲಿ ಯಶಸ್ವಿಯಾದ ಹೋರಾಟಗಾರರು
Published : 24 ನವೆಂಬರ್ 2025, 2:51 IST
Last Updated : 24 ನವೆಂಬರ್ 2025, 2:51 IST
ಫಾಲೋ ಮಾಡಿ
Comments
ದಟ್ಟಣೆ ಸಮೀಕ್ಷೆ:
ರಾಮದುರ್ಗ ಜನತೆಯ ಹೋರಾಟದ ಭಾಗವಾಗಿ 2019ರಲ್ಲಿ ಸರ್ವೆ ನಡೆದು ಜನದಟ್ಟಣೆ ಸಮೀಕ್ಷೆಯನ್ನು ವಿಫಲಗೊಳಿಸಲಾಗಿತ್ತು. ಆದರೆ, ರಾಮದುರ್ಗ ತಾಲ್ಲೂಕಿನ ಗೊಡಚಿ ಕ್ಷೇತ್ರ, ಸುರೇಬಾನದ ಶಬರಿಕೊಳ್ಳ ಕ್ಷೇತ್ರ, ರಾಮದುರ್ಗದ ಅತಿ ಎತ್ತರದ ಶಿವನ ಮೂರ್ತಿ, ಸವದತ್ತಿ ತಾಲ್ಲೂಕಿನ ಶಿರಸಂಗಿಯ ಕಾಳಿಕಾ ದೇವಸ್ಥಾನ ಮತ್ತು ಯಲ್ಲಮ್ಮನ ಗುಡ್ಡದ ದರ್ಶನಕ್ಕೆ ವರ್ಷದಲ್ಲಿ 2 ಕೋಟಿಗೂ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಾರೆಂಬ ಮಾಹಿತಿಯನ್ನು ಈಗ ನೀಡಲಾಗಿದೆ.
‘ಲೋಪಯುಕ್ತ ಸಮೀಕ್ಷೆ ತಿರಸ್ಕರಿಸಿ’
ಬಾಗಲಕೋಟೆಯ ಲೋಕಾಪುರ ಸುತ್ತಲೂ ಸಿಮೆಂಟ್‌ ಕಾರ್ಖಾನೆ, ಸುಣ್ಣದ ಭಟ್ಟಿಗಳು, ಸಕ್ಕರೆ ಕಾರ್ಖಾನೆಗಳು ವಾಣಿಜ್ಯ ಅಭಿವೃದ್ಧಿಗೆ ಪೂರಕವಾಗಿವೆ. ರಾಮದುರ್ಗ ತಾಲ್ಲೂಕಿನಲ್ಲೂ ಎರಡು ಸಕ್ಕರೆ ಕಾರ್ಖಾನೆಗಳು, ನೇಕಾರಿಕೆ ಸಾಮಗ್ರಿಗಳ ಸಾಗಣೆ ಆಗುತ್ತಿದೆ. ಸವದತ್ತಿ ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆರ್ಥಿಕತೆಗೆ ಪೂರಕವಾಗಲಿದೆ. ಇದನ್ನೂ ಲೆಕ್ಕಿಸದ ಸಮೀಕ್ಷಾ ತಂಡ ತಪ್ಪು ವರದಿ ನೀಡಿ ಈ ಭಾಗದ ರೈಲ್ವೆ ಪ್ರೇಮಿಗಳ ಕನಸನ್ನು ನುಚ್ಚುನೂರು ಮಾಡಿತು’ ಎಂಬುದು ಹೋರಾಟಗಾರರ ತಕರಾರು.
ತಾಂತ್ರಿಕ ಸಮೀಕ್ಷೆ:
‘ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಮುದ್ರ ನೀರು ಮತ್ತು ನದಿಗಳು ಇರುವ ಕಾರಣ ಸೇತುವೆಗಳನ್ನು ನಿರ್ಮಿಸಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಸುರಂಗ ಮಾರ್ಗದ ಮೂಲಕ ರೈಲು ಸಂಚರಿತ್ತಿದೆ. ರಾಮದುರ್ಗದ ಸುತ್ತಲೂ ರೈಲು ಸರಾಗವಾಗಿ ಚಲಿಸುವ ಪ್ರಾಕೃತಿಕ ಸೌಲಭ್ಯ ಇದೆ. ಹಾಗಾಗಿ, ಈ ಯೋಜನೆಗೆ ತಾಂತ್ರಿಕ ಸಮಸ್ಯೆ ಎದುರಾಗುವುದಿಲ್ಲ’ ಎಂದು ಹೋರಾಟಗಾರರು ತಿಳಿಸಿದರು.
ಲೋಕಾಪುರ– ಧಾರವಾಡ ಹೊಸ ರೈಲ್ವೆ ಮಾರ್ಗವನ್ನು ಮುಂಬರುವ ಬಜೆಟ್‌ ಅಧಿವೇಶನದಲ್ಲಿ ನಿರ್ಧಾರ ಮಾಡಿ ಅನುದಾನ ಮೀಸಲಿಡದಿದ್ದರೆ ಹೋರಾಟ ನಡೆಸಲಾಗುವುದು
ಕುತ್ಬುದ್ದೀನ ಖಾಜಿ, ಅಧ್ಯಕ್ಷ, ರಾಜ್ಯ ರೈಲ್ವೆ ಹೋರಾಟ ಸಮಿತಿ
ರಾಮದುರ್ಗ, ಸವದತ್ತಿ ತಾಲ್ಲೂಕಿನ ಕ್ಷೇತ್ರಗಳಿಗೆ ವರ್ಷದಲ್ಲಿ ಮೂರ್ನಾಲ್ಕು ಲಕ್ಷದಷ್ಟು ಭಕ್ತರು ಆಗಮಿಸಲಿದ್ದಾರೆ. ಭಕ್ತರ ಅನುಕೂಲಕ್ಕೆ ರೈಲು ಸಂಪರ್ಕ ಅವಶ್ಯವಿದೆ
ಗೈಬು ಜೈನೆಖಾನ್, ಮುಖಂಡ, ರಾಮದುರ್ಗ ರೈಲ್ವೆ ಹೋರಾಟ ಸಮಿತಿ
ಮುಧೋಳ, ರಾಮದುರ್ಗ, ಸವದತ್ತಿ ತಾಲ್ಲೂಕುಗಳ ಸಕ್ಕರೆ ಹಾಗೂ ಸುಣ್ಣದ ಕಾರ್ಖಾನೆಯ ಉತ್ಪನ್ನ ಸಾಗಣೆ ಕಷ್ಟವಾಗಿದ್ದು, ರೈಲು ಸೇವೆ ಅನಿವಾರ್ಯ ಇದೆ
ಮಹ್ಮದ್ ಶೆಫಿ ಬೆಣ್ಣಿ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಗುಡ್ಡ ಕೊರೆಯಬೇಕಿದೆ ಎಂಬುದು ಸುಳ್ಳು. ಗೊಡಚಿ, ಶಬರಿಕೊಳ್ಳ, ಕಾಳಿಕಾ ದೇವಸ್ಥಾನ, ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಲು ಸಗಮ ದಾರಿ ಇದೆ
ಎಂ.ಕೆ.ಯಾದವಾಡ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಕಳೆದ ಸಾರಿ ಸಮೀಕ್ಷೆ ನಡೆಸಿದಾಗ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಮರು ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಜನರ ಕನಸು ಹಾಳುಮಾಡಬಾರದು
ಜಗದೀಶ ಶೆಟ್ಟರ್‌, ಸಂಸದ, ಬೆಳಗಾವಿ
ಗುಡ್ಡ ಕೊರೆಯಬೇಕಿದೆ ಎಂಬುದು ಸುಳ್ಳು. ಗೊಡಚಿ, ಶಬರಿಕೊಳ್ಳ, ಕಾಳಿಕಾ ದೇವಸ್ಥಾನ, ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಲು ಸಗಮ ದಾರಿ ಇದೆ
ಎಂ.ಕೆ.ಯಾದವಾಡ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಕಳೆದ ಸಾರಿ ಸಮೀಕ್ಷೆ ನಡೆಸಿದಾಗ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಮರು ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಜನರ ಕನಸು ಹಾಳುಮಾಡಬಾರದು
ಜಗದೀಶ ಶೆಟ್ಟರ್‌, ಸಂಸದ, ಬೆಳಗಾವಿ
ಮುಧೋಳ, ರಾಮದುರ್ಗ, ಸವದತ್ತಿ ತಾಲ್ಲೂಕುಗಳ ಸಕ್ಕರೆ ಹಾಗೂ ಸುಣ್ಣದ ಕಾರ್ಖಾನೆಯ ಉತ್ಪನ್ನ ಸಾಗಣೆ ಕಷ್ಟವಾಗಿದ್ದು, ರೈಲು ಸೇವೆ ಅನಿವಾರ್ಯ ಇದೆ
ಮಹ್ಮದ್ ಶೆಫಿ ಬೆಣ್ಣಿ, ಮುಖಂಡ, ರೈಲ್ವೆ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT