ಅಥಣಿ: ತಾಲ್ಲೂಕಿನ ಮಹಿಷವಾಡಗಿ ಡಾ.ಆನಂದ ಉಪಾಧ್ಯೆ ಅವರನ್ನು ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, 2 ಗಂಟೆ ಚಿತ್ರಹಿಂಸೆ ಕೊಟ್ಟಿರುವ ಕುರಿತು ದೂರು ದಾಖಲಾಗಿದೆ.

ಕಿಡ್ನಾಪ್ ಮಾಡುವ ವೇಳೆ ಅವರ ಸಹೋದರಿ ಶೋಭಾ ಉಪಾಧ್ಯೆ ಅವರ ಮೇಲೂ ಹಲ್ಲೆ ಮಾಡಿರುವದಾಗಿ ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ತಾಲೂಕಿನ ಸತ್ತಿ ಗ್ರಾಮದ ಸಮೀಪ ಝೀರೊ ಪಾಯಿಂಟ್ನಲ್ಲಿ ಘಟನೆ ನಡೆದಿದೆ. ಮಹೀಷವಾಡಗಿ ಗ್ರಾಮದ ನಿವಾಸಿ ಪದ್ಮಾವತಿ ಇಂಟರ್ ನ್ಯಾಷನಲ್ ಸ್ಕೂಲ್ನ ಡಾ.ಆನಂದ ಉಪಾಧ್ಯೆ ಅವರನ್ನು ಜುಲೈ 10 ರಂದು ಸತ್ತಿ ಝೀರೋ ಪಾಯಿಂಟನಲ್ಲಿರುವ ಶಾಲೆ ಕ್ಯಾಂಪ್ನಿಂದ ಕಿಡ್ನಾಪ್ ಮಾಡಿ ಹಲ್ಲೆ ಆರೋಪ, ಗಂಭೀರವಾಗಿ ಗಾಯಗೊಂಡ ಡಾ.ಆನಂದ ಉಪಾದ್ಯೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ .

ಪದ್ಮಾವತಿ ಇಂಟರ್ನ್ಯಾಷನಲ್ ಸ್ಕೂಲ್ ಮಾಲೀಕ ಆನಂದ ಉಪಾದ್ಯೆ ತೇಲಿ ಕುಟುಂಬದ ಜೊತೆಗೆ ಸೇರಿ 2018 ರಲ್ಲಿ ಸ್ಕೂಲ್ ಆರಂಭಿಸಿದ್ದರು. ಆ ನಂತರ ಹಣಕಾಸಿನ ವಿಚಾರವಾಗಿ ಹಲವು ವರ್ಷಗಳಿಂದ ಗಲಾಟೆ ಶುರುವಾಗಿತ್ತು. ತೇಲಿ ಕುಟುಂಬಕ್ಕೆ ₹1.80 ಕೋಟಿ ಹಣ ನೀಡಿ ಶಿಕ್ಷಣ ಸಂಸ್ಥೆಯಿಂದ ಹೊರ ಹಾಕಿದ್ದ ಡಾ.ಆನಂದ ಉಪಾಧ್ಯೆ , ಹಲ್ಲೆ ನಂತರ ತೇಲಿ ಕುಟುಂಬದ ವಿರುದ್ದ ಸ್ಕೂಲ್ ವಿಚಾರವಾಗಿ ಹೈಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಹಲ್ಲೆ ಮಾಡಿದ ಆರೋಪಿ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಹಾಗೂ ತೇಲಿ ಕುಟುಂಬವು ಸಹ ಡಾ.ಆನಂದ ಉಪಾಧ್ಯೆ ಮೇಲೆ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.