ಚಿಕ್ಕೋಡಿ: ‘ಸತ್ಯ, ಪ್ರೇಮ, ಸೇವೆ, ಸ್ವಾರ್ಥ, ತ್ಯಾಗ ಎಂಬ ಧ್ಯೇಯವಾಕ್ಯದ ಪರಿಕಲ್ಪನೆ ಹೊಂದಿರುವ ಕೆಎಲ್ಇ ಸಂಸ್ಥೆಯು ದೇಶ ವಿದೇಶಗಳಲ್ಲಿ ಹೆಸರು ಪಡೆದುಕೊಂಡಿದೆ. ಸಪ್ತರ್ಷಿಗಳು ಸಂಸ್ಥೆ ನಿರ್ಮಾಣಕ್ಕೆ ಮಾಡಿರುವ ತ್ಯಾಗ ಅವಿಸ್ಮರಣೀಯ’ ಎಂದು ನಿವೃತ್ತ ಪ್ರಾಚಾರ್ಯ ಉದಯಸಿಂಗ್ ರಾಜಪೂತ ಹೇಳಿದರು.

ಪಟ್ಟಣದ ಸಿ.ಬಿ.ಕೋರೆ ಬಹುತಾಂತ್ರಿಕ ವಿದ್ಯಾಲಯ ಹಾಗೂ ಕೆಎಲ್ಇ ಅಂಗಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ಕೆಎಲ್ಇ ಸಂಸ್ಥೆಯ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಎಲ್ಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ದರ್ಶನ ಬಿಳ್ಳೂರ ಮಾತನಾಡಿ, ‘ಸಪ್ತರ್ಷಿಗಳು ಅಡಿಪಾಯ ಹಾಕಿದ ಕೆಎಲ್ಇ ಸಂಸ್ಥೆಗೆ ಕಳೆದ 4 ದಶಕಗಳಿಂದ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಶ್ರಮದ ಫಲವಾಗಿ ದೇಶ ವಿದೇಶಗಳಲ್ಲಿ 315 ಸಂಸ್ಥೆಗಳನ್ನು ಹೊಂದಿ ಹೆಮ್ಮರವಾಗಿ ಬೆಳೆದು ನಿಂತಿದೆ’ ಎಂದರು.

ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಅವಿಸ್ಮರಣೀಯ ಸೇವೆ ಸಲ್ಲಿಸಿದ ಕೆಎಲ್ಇ ಸಂಸ್ಥೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ವಿವೇಕ ಖೋತ, ವೆಂಕಟರೆಡ್ಡಿ, ಪ್ರಕಾಶ ಕೋಳಿ, ಸುನೀಲ ಎಂ.ಬಿ, ವರಲಕ್ಷ್ಮಿ, ಡಿ.ಬಿ.ಸೊಲ್ಲಾಪುರೆ, ಅಮರ ಪಶುಮತಿಮಠ, ಸುಧೀಂದ್ರ ಹೊನವಾಡ, ಕಿರಣ ಮುತ್ನಾಳೆ, ವಿಜಯ ಹೂಗಾರ ಎಂ.ಬಿ.ನಾವಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.