ಅಥಣಿ (ಬೆಳಗಾವಿ ಜಿಲ್ಲೆ): ದನದ ಕೊಟ್ಟಿಗೆ ನಿರ್ಮಾಣಕ್ಕೆ ಹಣ ಮಂಜೂರಾದ ನೆರವಿನ ಹಣ ನೀಡದ ಕಾರಣ, ರೈತ ಸತೀಶ ಕೋಳಿ ಅವರು ಸಂಬರಗಿ ಗ್ರಾಮ ಪಂಚಾಯಿತಿ ಕಚೇರಿ ಒಳಗೆ ಎಮ್ಮೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಕಟ್ಟದ ಒಳಗಿನ ಕಿಟಕಿಗೆ ಎಮ್ಮೆ ಕಟ್ಟಿದ ರೈತ, ಅಲ್ಲೇ ಮೇವು ಹಾಕಿದರು. ಗಂಟೆಗಟ್ಟಲೇ ಎಮ್ಮೆಯನ್ನು ಅಲ್ಲೇ ಮಲಗಿಸಿದರು. ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ರೈತನನ್ನು ಸಮಾಧಾನಪಡಿಸಿದರು.

‘ದನದ ಕೊಟ್ಟಿಗೆ ನಿರ್ಮಾಣಕ್ಕೆ ವರ್ಷದ ಹಿಂದೆಯೇ ಸಂಬರಗಿ ಗ್ರಾಮ ಪಂಚಾಯಿತಿಯಿಂದ ನನಗೆ ನೆರವಿನ ಹಣ ಮಂಜೂರಾಗಿದೆ. ₹50 ಸಾವಿರ ವೆಚ್ಚದಲ್ಲಿ ಕೊಟ್ಟಿಗೆ ಕಟ್ಟಿ ವರ್ಷವಾದರೂ ಹಣ ನೀಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಿಮಗೆ ಮಂಜೂರು ಮಾಡಿರುವ ಯೋಜನೆ ರದ್ದಾಗಿದೆ ಎಂದು ಹೇಳುತ್ತಾರೆ’ ಎಂದು ರೈತ ಸತೀಶ ದೂರಿದ್ದಾರೆ. ಅಧಿಕಾರಿ ನೀಡಿದ ಭರವಸೆ ಮೇರೆಗೆ ಅವರು ಎಮ್ಮೆಯನ್ನು ಮನೆಗೆ ಒಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.