ಮನೆ ಛಾವಣಿ ಕುಸಿದು ದಂಪತಿ ಸಾವು
ಬಳ್ಳಾರಿ: ನಿರಂತರ ಮಳೆಯಿಂದಾಗಿ ಮನೆಯ ಮಣ್ಣಿನ ಮೇಲ್ಛಾವಣಿ ಕುಸಿದು ದಂಪತಿ ಕೊಂಗಣ್ಣ (45) ಹಾಗೂ ಸಾವಿತ್ರಿ( 40) ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕೌಲ್ ಬಜಾರ್ ನ ಆದೋನಿ ಸ್ಟ್ರೀಟ್ನಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಅವರ ಮಗ ಸಂತೋಷ್ ಅಪಾಯದಿಂದ ಪಾರಾಗಿದ್ದಾನೆ. ಮನೆ ಸೋರುತ್ತಿದ್ದುದರಿಂದ ದಂಪತಿಯ ಇಬ್ಬರು ಹೆಣ್ಣು ಮಕ್ಕಳು ಸಂಬಂಧಿಕರ ಮನೆಯಲ್ಲಿ ಮಲಗಿದ್ದರು.
ಮಣ್ಣುಕುಸಿದ ಬಳಿಕ ಎಚ್ಚರಗೊಂಡ ಬಾಲಕ ಅಘಾತಗೊಂಡು ಒಳಗಿನಿಂದಲೇ ಬಾಗಿಲು ಬಡಿದು ಕಿರುಚಿಕೊಂಡ ಸದ್ದಿಗೆ ಎಚ್ಚರಗೊಂಡ ನೆರೆಹೊರೆಯವರು ಬಾಗಿಲು ಮುರಿದು ಆತನನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.