ಶುಕ್ರವಾರ, ಜನವರಿ 22, 2021
28 °C

ಮಕ್ಕಳಿಗೆ ಮೊಬೈಲ್‌ ಬದಲು ಪುಸ್ತಕ ಕೊಡಿ: ಮಂಜಮ್ಮ ಜೋಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಪೋಷಕರು ಮಕ್ಕಳ ಕೈಗೆ ಮೊಬೈಲ್‌ ಕೊಡುವ ಬದಲು ಪುಸ್ತಕ ಕೊಡಬೇಕು’ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

ಕರ್ನಾಟಕ ಕಲಾಭಿಮಾನ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಾಡಿನ ಕಲೆ, ಸಂಸ್ಕೃತಿ ಬೆಳೆಯಬೇಕು. ಅದು ಮಕ್ಕಳಿಂದ ಸಾಧ್ಯ. ಹಾಗಾಗಿ ಅವರಲ್ಲಿ ಓದುವ ಸಂಸ್ಕೃತಿ ಬೆಳೆಸಬೇಕು. ಮೊಬೈಲ್‌ ವ್ಯಾಮೋಹದಿಂದ ಮಕ್ಕಳು ಓದುವುದು ಕಡಿಮೆಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪೋಷಕರು ಅದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ತಿಳಿಸಿದರು.

‘ಮಕ್ಕಳಿಗೆ ಚಿಕ್ಕಂದಿನಿಂದಲೂ ಕಲೆಯನ್ನು ಆರಾಧಿಸುವ ಗುಣ ಮೂಡಿಸಬೇಕು. ಕಲೆ, ಸಂಸ್ಕೃತಿ ಉಳಿದರಷ್ಟೇ ಕಲಾವಿದರು ಬದುಕುಳಿಯುತ್ತಾರೆ. ಅರ್ಹ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು’ ಎಂದು ಹೇಳಿದರು.

ಸಂಘದ ಅಧ್ಯಕ್ಷ ಮೋಹನ್ ಕುಂಟಾರ್ ಮಾತನಾಡಿ, ‘ಕರ್ನಾಟಕ ಕಲಾಭಿಮಾನ ಸಂಘವು 25 ವರ್ಷಗಳಿಂದ ರಚನಾತ್ಮಕ ಕೆಲಸ ಮಾಡುತ್ತಿದೆ. ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸಿದೆ. ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಬದ್ಧವಾಗಿದೆ’ ಎಂದರು.

ಜಾನಪದ ತಜ್ಞ ಪ್ರೊ.ಬಿ.ಆರ್.ಪಾಟೀಲ, ವಾತ್ಸಲ್ಯ ಟ್ರಸ್ಟ್ ಕಾರ್ಯದರ್ಶಿ ಯಶಸ್ಚಿನಿ, ಸಂಘದ ಉಪಾಧ್ಯಕ್ಷ ಶ್ರೀಪತಿ ಆಚಾರ್, ಕೋಶಾಧ್ಯಕ್ಷ ಪಿ.ಸುಂದರನ್, ಕಾರ್ಯದರ್ಶಿ ಬಿ.ವಿ.ಭಟ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು