ಬುಧವಾರ, ಸೆಪ್ಟೆಂಬರ್ 22, 2021
24 °C
ಕೊಟ್ಟೂರು: ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್

ಕಠಿಣ ಕ್ರಮ: ಪಿಎಸ್‌ಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟೂರು: ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕ್‌ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಎಚ್ ನಾಗಪ್ಪ ಎಚ್ಚರಿಸಿದರು.

ಸೋಮವಾರ ಅಧಿಕಾರವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರೇಣುಕಾ ಟಾಕೀಸ್ ರಸ್ತೆ, ಗಾಂಧಿ ಸರ್ಕಲ್‌ನ ಮುಖ್ಯ ರಸ್ತೆಗಳಲ್ಲಿ ಗೂಡ್ಸ್ ಗಾಡಿಗಳು, ಬೈಕ್‌ಗಳನ್ನು ಮನಬಂದಂತೆ ಪಾರ್ಕಿಂಗ್ ಮಾಡಿದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊಟ್ಟೂರಿನಲ್ಲಿ ಹಿಂದೆ ಐದು ವರ್ಷ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಮಟ್ಕಾ, ಜೂಜಾಟ, ಕ್ರಿಕೆಟ್‌ ಬೆಟ್ಟಿಂಗ್ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಪೋಷಕರು ತಮ್ಮ ಮಕ್ಕಳಿಗೆ ಬೈಕ್ ಕೊಡುವ ಮುನ್ನ ಅಪಘಾತಗಳ ಬಗ್ಗೆ ತಿಳಿಸಬೇಕು. ಪಟ್ಟಣದ ಸಮಸ್ಯೆಗಳ ಕುರಿತು ಹಂತಹಂತವಾಗಿ ಸಭೆ ನೆಡೆಸಲಾಗುವುದು. ಎಲ್ಲ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದರು.

ಠಾಣೆಯ ಸಿಬ್ಬಂದಿ ಎ.ಎಸ್.ಐ ಅಬ್ಬಾಸ್, ಹೇಡ್ ಕಾನ್‌ಸ್ಟೆಬಲ್ ದೊಡ್ಡಬಸಪ್ಪ.ಜಿ, ಕಾನ್‌ಸ್ಟೆಬಲ್ ಕೊಟ್ರಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.