ಜೋಳದರಾಶಿ ಗುಡ್ಡದಲ್ಲಿ ಪೊಲೀಸರ ಚಾರಣ

ಹೊಸಪೇಟೆ: ಸ್ಥಳೀಯ ಪೊಲೀಸರು ಶುಕ್ರವಾರ ನಗರ ಹೊರವಲಯದ ಜೋಳದರಾಶಿ ಗುಡ್ಡ ಹತ್ತಿದರು.
ನಗರದ ಡಿವೈಎಸ್ಪಿ ಕಚೇರಿ ಬಳಿ ಸೇರಿದ ಪೊಲೀಸರು ಅಲ್ಲಿಂದ ಸಂಡೂರು ರಸ್ತೆಯ ಲಿಟ್ಲ್ ಫ್ಲವರ್ ಶಾಲೆಯ ವರೆಗೆ ವಾಕ್ ಮಾಡಿದರು. ನಂತರ ಅಲ್ಲಿಂದ ಗುಡ್ಡ ಹತ್ತಿದರು. ಬಿಳಿ ಬಣ್ಣದ ಟೀ ಶರ್ಟ್, ಖಾಕಿ ಪ್ಯಾಂಟ್ ಧರಿಸಿದ್ದ ಪೊಲೀಸರು ಚುಮು ಚುಮು ಚಳಿಯಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ಗುಡ್ಡ ಏರಿದರು. ದುರ್ಗಾ ಪಡೆಯ ಮಹಿಳಾ ಪೊಲೀಸರು ಇದ್ದರು.
ಗುಡ್ಡದ ತುತ್ತ ತುದಿಯಲ್ಲಿ ಸಮೂಹ ಛಾಯಾಚಿತ್ರ, ಸೆಲ್ಫಿ ತೆಗೆಸಿಕೊಂಡರು. ಕೆಲ ನಿಮಿಷ ವಿಶ್ರಾಂತಿ ಮಾಡಿದ ಪೊಲೀಸರು, ಪುನಃ ಬಂದ ಮಾರ್ಗದಲ್ಲೇ ಹಿಂತಿರುಗಿದರು.
ಡಿವೈಎಸ್ಪಿ ವಿ. ರಘುಕುಮಾರ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವಿ. ನಾರಾಯಣ, ಶ್ರೀನಿವಾಸ ಮೇಟಿ, ಶ್ರೀನಿವಾಸ, ಜಯಪ್ರಕಾಶ ಹಾಗೂ 120 ಜನ ಸಿಬ್ಬಂದಿ ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.