ಗಾಣಗಳಿಗೆ ಕಬ್ಬು ಪೂರೈಸಿದ ರೈತರು: ದಾಖಲೆ ಪ್ರಮಾಣದಲ್ಲಿ ಬೆಲ್ಲ ಉತ್ಪಾದನೆ

ಬುಧವಾರ, ಜೂನ್ 26, 2019
25 °C
ಮುಚ್ಚಿದ ಕಾರ್ಖಾನೆಗಳು

ಗಾಣಗಳಿಗೆ ಕಬ್ಬು ಪೂರೈಸಿದ ರೈತರು: ದಾಖಲೆ ಪ್ರಮಾಣದಲ್ಲಿ ಬೆಲ್ಲ ಉತ್ಪಾದನೆ

Published:
Updated:
Prajavani

ಹೊಸಪೇಟೆ: ಈ ಸಲ ತಾಲ್ಲೂಕಿನ ಕಬ್ಬಿನ ಗಾಣಗಳು ದಾಖಲೆ ಪ್ರಮಾಣದಲ್ಲಿ ಬೆಲ್ಲ ಉತ್ಪಾದನೆ ಮಾಡಿವೆ.

ನಗರದ ಚಿತ್ತವಾಡ್ಗಿಯಲ್ಲಿರುವ ತಾಲ್ಲೂಕಿನ ಏಕೈಕ ಸಕ್ಕರೆ ಕಾರ್ಖಾನೆ ‘ಇಂಡಿಯನ್‌ ಶುಗರ್‌ ರಿಫೈನರಿ‘ (ಐ.ಎಸ್‌.ಆರ್‌.) ಬಾಗಿಲು ಮುಚ್ಚಿರುವುದರಿಂದ ಈ ಬಾರಿ ಅನಿವಾರ್ಯವಾಗಿ ರೈತರು ಆಲೆಮನೆಗಳತ್ತ ಮುಖ ಮಾಡಬೇಕಾಯಿತು. ಅದನ್ನೇ ಬಂಡವಾಳ ಮಾಡಿಕೊಂಡು ಕಬ್ಬಿನ ಗಾಣದವರು ದಾಖಲೆ ಪ್ರಮಾಣದಲ್ಲಿ ಬೆಲ್ಲ ತಯಾರಿಸಿ ಕೈ ತುಂಬ ಹಣ ಗಳಿಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು ನಾಲ್ಕೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಈ ಪೈಕಿ ಒಂದೂವರೆ ಲಕ್ಷ ಟನ್‌ ಕಬ್ಬನ್ನು ರೈತರು ಆಲೆಮನೆಗಳಿಗೆ ಸಾಗಿಸಿದ್ದಾರೆ. 13 ಸಾವಿರ ಟನ್‌ ದಾಖಲೆ ಪ್ರಮಾಣದ ಬೆಲ್ಲ ಉತ್ಪಾದನೆ ಮಾಡಿದ್ದಾರೆ. ಇನ್ನೂ ಬೆಲ್ಲ ಉತ್ಪಾದನೆ ಮುಂದುವರೆದಿದೆ. ಕಬ್ಬಿನ ಗಾಣಗಳಿಗೆ ಕಬ್ಬು ಪೂರೈಸಿದವರು ಬಹುತೇಕ ಸಣ್ಣ ಮತ್ತು ಅತಿ ಸಣ್ಣ ರೈತರು ಎನ್ನುವುದು ವಿಶೇಷ.

ದೊಡ್ಡ ರೈತರು ಮೈಲಾರ, ಮುಂಡರಗಿ, ದುಗ್ಗತಿ, ಕುಕ್ಕವಾಡ ಸೇರಿದಂತೆ ಇತರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ್ದಾರೆ. ಸರ್ಕಾರ ಈ ಸಲ ಪ್ರತಿ ಟನ್‌ ಕಬ್ಬಿಗೆ ₹2,750 ನಿಗದಿ ಪಡಿಸಿತ್ತು. ಕಬ್ಬು ಕಟಾವು, ಸಾಗಣೆ ವೆಚ್ಚದ ಹೊರೆಯಿಂದ ತಪ್ಪಿಸಿಕೊಳ್ಳಲು ಸಣ್ಣ ರೈತರು ದೂರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವುದರ ಬದಲು ಆಲೆಮನೆಗಳಿಗೆ ಸಾಗಿಸಿದ್ದಾರೆ. ಡಿಸೆಂಬರ್‌ ವರೆಗೆ ಕಬ್ಬಿನ ಗಾಣಗಳು ಪ್ರತಿ ಟನ್‌ ಕಬ್ಬಿಗೆ ₹1,200 ಪಾವತಿಸಿದರೆ, ಜನವರಿಯಿಂದ ₹2,100 ಪಾವತಿಸುತ್ತಿವೆ. 

‘ರೈತರು ದೊಡ್ಡ ಸಂಖ್ಯೆಯಲ್ಲಿ ಆಲೆಮನೆಗಳಿಗೆ ಕಬ್ಬು ಪೂರೈಸಿದ್ದರಿಂದ ಡಿಸೆಂಬರ್‌ ವರೆಗೆ ಪ್ರತಿ ಟನ್‌ ಕಬ್ಬಿಗೆ ಕಬ್ಬಿನ ಗಾಣದವರು ₹1,200 ಕೊಟ್ಟಿದ್ದಾರೆ. ಜನವರಿಯಲ್ಲಿ ಕಬ್ಬಿನ ಪೂರೈಕೆ ಕಡಿಮೆಯಾಗಿದ್ದರಿಂದ ಟನ್‌ ಕಬ್ಬಿಗೆ ₹2,100 ಪಾವತಿಸುತ್ತಿವೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ಹೇಳಿದರು.

ಈ ಆರೋಪವನ್ನು ಕಬ್ಬಿನ ಗಾಣ ಮಾಲೀಕರು ನಿರಾಕರಿಸುತ್ತಾರೆ. ‘ಕಬ್ಬು ಪೂರೈಸುವಂತೆ ಯಾವ ರೈತರ ಮೇಲೆಯೂ ಒತ್ತಡ ಹೇರಿಲ್ಲ. ಸ್ವಯಂಪ್ರೇರಿತರಾಗಿ ಕಬ್ಬು ಪೂರೈಸಿದ್ದಾರೆ. ಅನ್ಯಾಯವೆಸಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎನ್ನುತ್ತಾರೆ ಸ್ಥಳೀಯ ಆಲೆಮನೆಯೊಂದರ ಮಾಲೀಕರು.

 

 

 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !