ಶನಿವಾರ, ಸೆಪ್ಟೆಂಬರ್ 21, 2019
21 °C

ಬುಕ್ಕಸಾಗರ ದೇಗುಲದ ಹುಂಡಿ ಹಣ ಎಣಿಕೆ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಬುಕ್ಕಸಾಗರದ ಏಳುಹೆಡೆ ನಾಗಪ್ಪ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣದ ಎಣಿಕೆ ಕೆಲಸ ಸೋಮವಾರ ನಡೆಯಿತು.

2018ರ ನವೆಂಬರ್‌ನಿಂದ ಮೇ 6ರ ವರೆಗೆ ಹುಂಡಿಯಲ್ಲಿ ಒಟ್ಟು ₹1,81,965 ಸಂಗ್ರಹವಾಗಿದೆ. ₹2 ಸಾವಿರದ ಐದು ನೋಟುಗಳು, ₹500ರ 75, ₹200ರ 19, ₹100ರ 427, ₹50ರ 528, ₹20ರ 995, ₹10ರ 3,157, ₹5ರ 29 ನೋಟುಗಳು, ₹10ರ 20, ₹5ರ 786, ₹2ರ 1,600, ₹1ರ 2,620 ನಾಣ್ಯಗಳು ಸಂಗ್ರಹವಾಗಿವೆ. 

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್‌. ಪ್ರಕಾಶ್‌ ರಾವ್‌, ಪ್ರಭಾರ ಸೂಪರಿಟೆಂಡೆಂಟ್‌ ಮಲ್ಲಪ್ಪ, ಸಿಬ್ಬಂದಿ ರಾಘವೇಂದ್ರ ವಿಜಯ, ಐ. ಚಂದ್ರಶೇಖರ್‌ ರೆಡ್ಡಿ, ರಾಜಶೇಖರ ಗೌಡ, ಪೊಲೀಸ್‌ ಪೇದೆ ರಾಘವೇಂದ್ರ ಸಮ್ಮುಖದಲ್ಲಿ ಹಣದ ಎಣಿಕೆ ಕೆಲಸ ನಡೆಯಿತು.

Post Comments (+)