ಬೆಂಗಳೂರು: ಎರಡು ವರ್ಷದ ಮಗುವಿನ ಮೇಲೆ ನಾಯಿ ದಾಳಿ ನಡೆಸಿದ್ದು, ನಾಯಿಯ ಮಾಲೀಕರ ಮೇಲೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಡಿಸೆಂಬರ್ 23ರಂದು ಬಾಣಸವಾಡಿಯ ವೆಂಕಟಸ್ವಾಮಿ ಲೇಔಟ್ನಲ್ಲಿ ಮಗುವಿನ ಮೇಲೆ ಪಿಟ್ಬುಲ್ ನಾಯಿ ದಾಳಿ ನಡೆಸಿದೆ ಎಂಬ ದೂರು ಆಧರಿಸಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

‘ನಾಯಿ ದಾಳಿಯಿಂದ ಎರಡು ವರ್ಷದ ಹೆಣ್ಣು ಮಗುವಿನ ಭುಜಕ್ಕೆ ಗಂಭೀರವಾದ ಗಾಯಗಳಾಗಿವೆ’ ಎಂದು ತಂದೆ ನಬ್ರಾಜ್ ದಮಾಲ್ ಆರೋಪಿಸಿದ್ದಾರೆ.

‘ಮಗುವಿನ ಪೋಷಕರು ನೇಪಾಳದವರಾಗಿದ್ದು, ಬಾಣಸವಾಡಿಯ ವೆಂಕಟಸ್ವಾಮಿ ಲೇಔಟ್ನಲ್ಲಿ ವಾಸವಿದ್ದಾರೆ. ಅವರ ಮನೆಯ ಪಕ್ಕದಲ್ಲೇ ವಾಸವಿರುವವರು ಪಿಟ್ಬುಲ್ ನಾಯಿ ಸಾಕಿದ್ದಾರೆ. ಅಂದು ಸಂಜೆ 5.30ರ ವೇಳೆ ಮಗು ಎತ್ತಿಕೊಂಡು ತಾಯಿ ನಿಂತಿದ್ದರು. ಆಗ ನಾಯಿ ಏಕಾಏಕಿ ದಾಳಿ ನಡೆಸಿದೆ’ ಎಂದು ಆರೋಪಿಸಲಾಗಿದೆ.

‘ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆಗೆ ₹ 80 ಸಾವಿರ ವೆಚ್ಚವಾಗಿದೆ. ಮಾಲೀಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.