ಬೆಂಗಳೂರು: ಅತಿಯಾದ ವಾಯು ಮಾಲಿನ್ಯದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭವಿಷ್ಯದ ದಿನಗಳಲ್ಲಿ ಬೆಂಗಳೂರು ಕೂಡ ವಾಯು ಮಾಲಿನ್ಯದ ಕರಾಳ ಪರಿಣಾಮಗಳನ್ನು ಎದುರಿಸದಂತೆ ತಡೆಯುವ ಪ್ರಯತ್ನಗಳು ಆರಂಭವಾಗಿವೆ. ಕಣ್ಣಿಗೆ ಕಾಣದ ದೂಳಿನ ಕಣಗಳ ಸ್ವರೂಪದಲ್ಲಿರುವ ಅಪಾಯಕಾರಿ ಲೋಹದ ಅಂಶಗಳನ್ನು ಹೀರಿ, ಸಂಗ್ರಹಿಸಿ ಗಾಳಿಯನ್ನು ಸ್ವಚ್ಛಗೊಳಿಸುವ ಯಂತ್ರಗಳ ಬಳಕೆಯ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರಕಿದೆ.

ಗಾಳಿ ಶುದ್ಧೀಕರಣ ಯಂತ್ರೋಪಕರಣಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ‘ಎ ಟೆಕ್ ಟಾರ್ನ್’ ಎಂಬ ಕಂಪನಿ ಕಂಪನಿ ಜನದಟ್ಟಣೆಯ ಹೊರಾಂಗಣದಲ್ಲೂ ಗಾಳಿ ಶುದ್ಧೀಕರಿಸುವ ಯಂತ್ರವನ್ನು ಆವಿಷ್ಕರಿಸಿದೆ. ನಗರದ 20 ಜಂಕ್ಷನ್ಗಳಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಿದ್ದು, ಅವು ಗಾಳಿಯಲ್ಲಿರುವ ದೂಳಿನ ಕಣಗಳನ್ನು ಹೀರಿಕೊಂಡು ಶುದ್ಧ ಗಾಳಿಯನ್ನು ಹೊರಸೂಸುತ್ತಿವೆ. ಗಾಳಿಯಲ್ಲಿ ಸೇರಿಕೊಂಡಿರುವ ಕ್ಯಾಡ್ಮಿಯಂ, ಕ್ರೋಮಿಯಂ, ಸೀಸ ಮುಂತಾದ ಅಪಾಯಕಾರಿ ಲೋಹದ ಧಾತುಗಳು ಕೆ.ಜಿ.ಗಟ್ಟಲೆ ಈ ಯಂತ್ರಗಳಲ್ಲಿ ಸೆರೆಯಾಗುತ್ತಿವೆ.

ಎ ಟೆಕ್ ಟಾರ್ನ್ ಕಂಪೆನಿಯು ಎನ್ವಿರಾನ್ಮೆಂಟಲ್ ಅಸೋಸಿಯೇಷನ್ ಆಫ್ ಬೆಂಗಳೂರು, ಯುನೈಟೆಡ್ ವೇ ಬೆಂಗಳೂರು ಸಹಭಾಗಿತ್ವದಲ್ಲಿ ಈ ಯಂತ್ರಗಳನ್ನು ಸಂಚಾರ ದಟ್ಟಣೆಯ ಜಂಕ್ಷನ್ಗಳಲ್ಲಿ ಳವಡಿಸಿದೆ. ಇನ್ಫಾರ್ಮೆಟಿಕಾ, ಎನ್ಟಿಟಿ ಡೇಟಾ, ಕ್ಯಾಪ್ಕೊ ಕಂಪನಿಗಳು ತಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಮೂಲಕ ಪ್ರಾಯೋಜಕತ್ವ ನೀಡಿವೆ.

2019ರಲ್ಲಿ ಹಡ್ಸನ್ ವೃತ್ತದಲ್ಲಿ ಪ್ರಾಯೋಗಿಕವಾಗಿ ವಾಯು ಶುದ್ಧೀಕರಣ ಯಂತ್ರ ಅಳವಡಿಸಲಾಗಿತ್ತು. ಇದರಿಂದ ಅಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಂದಿತ್ತು. ವಾಹನ ದಟ್ಟಣೆ ಹೆಚ್ಚಿರುವ ಮತ್ತಷ್ಟು ಜಂಕ್ಷನ್ಗಳಲ್ಲಿ ಯಂತ್ರಗಳನ್ನು ಅಳವಡಿಸಲು ಈ ಕಂಪನಿಗೆ ಬಿಬಿಎಂಪಿ ಅನುಮತಿ ನೀಡಿತ್ತು. ಮಾಲಿನ್ಯ ಪ್ರಮಾಣ ಜಾಸ್ತಿ ಇರುವ ಜಂಕ್ಷನ್ಗಳನ್ನು ಗುರುತಿಸಿ, ಅಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗಿದೆ.

ನಗರದ ಹಲವು ಪ್ರದೇಶಗಳಲ್ಲಿ ಗಾಳಿಯಲ್ಲಿ ತೇಲಾಡುವ ಧೂಳಿನ ಕಣಗಳ ಪ್ರಮಾಣವು ಮಿತಿ ಮೀರಿದೆ. ಮೆಟ್ರೊ, ಚರಂಡಿ, ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿ ಮತ್ತಿತರ ಕಾಮಗಾರಿಗಳಿಂದಾಗಿ ದೂಳಿನ ಪ್ರಮಾಣವು ಜಾಸ್ತಿಯಾಗಿದ್ದು, ಉಸಿರಾಡಲು ಕಷ್ಟವಾಗುವ ಸ್ಥಿತಿ ಇದೆ.

‘ವಾಯು ಶುದ್ಧೀಕರಣ ಯಂತ್ರವು ವಾತಾವರಣದಲ್ಲಿ ಬೆರೆತು ಹೋಗಿರುವ ಧೂಳಿನ ಕಣ, ಹೊಗೆಯನ್ನೆಲ್ಲಾ ಹೀರಿಕೊಂಡು ಶುದ್ಧ ಗಾಳಿಯನ್ನು ಹೊರಬಿಡುತ್ತದೆ. ಆರು ಹಂತದಲ್ಲಿ ಗಾಳಿಯನ್ನು ಸೋಸುತ್ತದೆ. ಒಂದೊಂದು ಶೋಧಕವೂ (ಫಿಲ್ಟರ್) ಮಾಲಿನ್ಯಕಾರಕಗಳನ್ನು ಹಂತ ಹಂತವಾಗಿ ಸೋಸುತ್ತದೆ. ಕೊನೆಗೆ ಯಂತ್ರದ ತಳಭಾಗದಿಂದ ಶುದ್ಧ ಗಾಳಿ ಹೊರ ಬರುತ್ತದೆ’ ಎಂದು ಎ ಟೆಕ್ ಟಾರ್ನ್ ಕಂಪನಿಯ ಸಂಸ್ಥಾಪಕ ರಾಜೀವ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಯಂತ್ರವು ಒಂದು ನಿಮಿಷಕ್ಕೆ 3600 ಕ್ಯೂಬಿಕ್ ಗಾಳಿಯನ್ನು ಹೀರಿಕೊಂಡು ಶುದ್ಧೀಕರಿಸುತ್ತದೆ. ಈ ಯಂತ್ರದಿಂದ ಯಾವುದೇ ರೀತಿಯ ಶಬ್ಧ ಮಾಲಿನ್ಯ ಇರುವುದಿಲ್ಲ. ಹೀರಿಕೊಳ್ಳುವ ದೂಳು ಮತ್ತಿತರ ಮಾಲಿನ್ಯಕಾರಕಗಳು ಈ ಯಂತ್ರದಲ್ಲಿ ಸಂಗ್ರಹವಾಗುತ್ತವೆ. 15ರಿಂದ 20 ದಿನಗಳಿಗೊಮ್ಮೆ ಅದನ್ನು ಹೊರತೆಗೆಯಬೇಕು. ಮಾಲಿನ್ಯದ ಪ್ರಮಾಣ ಹೆಚ್ಚಿದ್ದರೆ, 15 ದಿನಗಳಲ್ಲಿ ಸುಮಾರು 2 ಕೆ.ಜಿಯಿಂದ 3 ಕೆ.ಜಿ.ಗಳಷ್ಟು ದೂಳು ಸಂಗ್ರಹಗೊಳ್ಳುವ ಸಾಧ್ಯತೆ ಇರುತ್ತದೆ’ ಎಂದರು

ಪ್ರತಿ ಯಂತ್ರಕ್ಕೆ ₹ 5 ಲಕ್ಷ ಒಂದು ಯಂತ್ರದ ಬೆಲೆಯು ₹4 ಲಕ್ಷದಿಂದ ₹5 ಲಕ್ಷದವರೆಗೂ ಇದೆ. ಇವು 360 ಡಿಗ್ರಿ ವ್ಯಾಪ್ತಿಯಲ್ಲಿನ ಗಾಳಿಯನ್ನು ಹೀರಿಕೊಂಡು ಶುದ್ಧೀಕರಿಸಿ ಹೊರಬಿಡುತ್ತವೆ ಎಂದು ರಾಜೀವ್ ತಿಳಿಸಿದರು. ಮನುಷ್ಯರು ಪ್ರಾಣಿ ಮತ್ತು ಪಕ್ಷಿಗಳ ಶ್ವಾಸಕೋಶವನ್ನು ಪ್ರವೇಶಿಸಿ ಹಾನಿಮಾಡಬಲ್ಲ ಅತಿಸಣ್ಣ ದೂಳಿನ ಕಣಗಳು ಹಾಗೂ ಕ್ಯಾಡ್ಮಿಯಮ್ ಕ್ರೋಮಿಯಂ ಸೀಸ ಸತುವಿನಂತಹ ಹಾನಿಕಾರಕ ಭಾರ ಲೋಹಗಳ ಕಣಗಳನ್ನು ಗಾಳಿ ಶುದ್ದೀಕರಣ ಯಂತ್ರಗಳು ಹೀರಿಕೊಳ್ಳುತ್ತವೆ. ಯಂತ್ರಗಳಿಂದ ಶುದ್ಧ ಗಾಳಿ ಹೊರಬರುತ್ತದೆ ಎಂದರು. –0– ಸಂಚಾರ ಪೊಲೀಸರಿಗೆ ಸಹಕಾರಿ ‘ಸಂಚಾರದಟ್ಟಣೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವಾಗ ವಾಯು ಮಾಲಿನ್ಯದಿಂದ ಎದೆ ನೋವು ಮೂಗು ಉರಿ ಸಮಸ್ಯೆ ಹೆಚ್ಚಾಗಿತ್ತು. ವಾಯು ಶುದ್ಧೀಕರಣ ಯಂತ್ರ ಅಳವಡಿಸಿದ ನಂತರ ಈ ಸಮಸ್ಯೆ ಕಡಿಮೆಯಾಗಿವೆ’ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದರು.

ಏನೆಲ್ಲ ಹೀರಲಿದೆ?

*ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿ.ಎಂ.) * ಪಿ.ಎಂ.10 *ಪಿ.ಎಂ. 2.5 * ಧೂಳಿನ ಕಣ * ಹೊಂಜು * ದುರ್ವಾಸನೆ * ಹೊಗೆಯ ಕಣ

ಗಾಳಿಯಲ್ಲಿರುವ ಲೋಹಗಳು ಪ್ರಮಾಣದ (ಪಿಪಿಎಂ) ಪತ್ತೆ

ಸ್ಥಳಗಳು;ಸಾವಯವ

ಇಂಗಾಲ(ಶೇಕಡಾವಾರು);ಕ್ಯಾಡ್ಮಿಯಮ್;ಕ್ರೋಮಿಯಮ್;ಸೀಸ;ಸತು;ತಾಮ್ರ;ಕಬ್ಬಿಣ;ಮ್ಯಾಗ್ನೇಸ್;ಬೇರಿಯಮ್;ಸಿಲಿಕಾ;ನಿಕ್ಕಲ್ ಬಿಶಪ್ ಕಾಟನ್ ಸ್ಕೂಲ್ ಜಂಕ್ಷನ್;48.5;0.50;32.37;149.9;17.94;27.43;22.24;3.77;0.85;76.25;3.06; ಎಂ.ಜಿ. ರಸ್ತೆ–ಬ್ರಿಗೇಡ್ ರಸ್ತೆ ಜಂಕ್ಷನ್;51.3;2.62;46.61;97.01;24.6;232.09;1247.27;335.11;31.65;49.27;21.28; ಟ್ರಿನಿಟಿ ವೃತ್ತ;39.4;4.55;54.11;106.22;28.29;245.08;1515.83;416.73;37.55;27.2;25.7; ಎಚ್ಎಎಲ್ ಸಿಗ್ನಲ್;39.4;3.5;57.88;108.8;27.71;315.34;1533.45;457.73;42.47;69.2;26.47; ಅನಿಲ್ ಕುಂಬ್ಳೆ ವೃತ್ತ;33.1;2.6;42.1;83.77;21.23;219.97;1118.64;282.52;28.39;52.2;17.17; ಕ್ಲೌಡ್9 ಪ್ರೆಸ್ಟೀಜ್ ಶಾಂತಿನಿಕೇತನ ಜಂಕ್ಷನ್;33.1;2.59;44.12;81.25;20.57;333.651088.06;294.63;27.5726.4;23.57

ಸಂಚಾರ ಪೊಲೀಸರಿಗೆ ಸಹಕಾರಿ

‘ಸಂಚಾರದಟ್ಟಣೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವಾಗ ವಾಯು ಮಾಲಿನ್ಯದಿಂದ ಎದೆ ನೋವು, ಮೂಗು ಉರಿ ಸಮಸ್ಯೆ ಹೆಚ್ಚಾಗಿತ್ತು. ವಾಯು ಶುದ್ಧೀಕರಣ ಯಂತ್ರ ಅಳವಡಿಸಿದ ನಂತರ ಈ ಸಮಸ್ಯೆ ಕಡಿಮೆಯಾಗಿವೆ’ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.