ಶನಿವಾರ, ಡಿಸೆಂಬರ್ 3, 2022
21 °C

ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಬಂದು ಕಳ್ಳತನ: ಅಭಿಷೇಕ್ ಎಂಬಾತನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಲ್ಲೇಶ್ವರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಅಭಿಷೇಕ್ (22) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರದ ಅಭಿಷೇಕ್, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕೆಲಸ ಮಾಡುತ್ತಿದ್ದ. ಅ. 23ರಂದು ಕೃತ್ಯ ಎಸಗಿದ್ದ. ಮನೆ ಮಾಲೀಕರು ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ₹ 1.03 ಲಕ್ಷ ಮೌಲ್ಯದ 23 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮನೆಯಲ್ಲಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಿದ್ದ ಮಾಲೀಕರು, ಆರೋಪಿ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಕ್ಯಾಮೆರಾ ಖರೀದಿಸಿದ್ದರು. ಸಹೋದ್ಯೋಗಿ ಜೊತೆ ಮನೆಗೆ ಬಂದಿದ್ದ ಆರೋಪಿ, ಮನೆಯ ಕೊಠಡಿಯಲ್ಲಿ ಕ್ಯಾಮೆರಾ ಅಳವಡಿಸುವ ಕೆಲಸ ಆರಂಭಿಸಿದ್ದ. ಮಾಲೀಕರು ಪ್ರಾರ್ಥನೆಗೆಂದು ಮಸೀದಿಗೆ ಹೋಗಿದ್ದರು.’

‘ಮಾಲೀಕರು ಇಲ್ಲದ ಸಮಯದಲ್ಲಿ ಮನೆಯಲ್ಲಿ ಹುಡುಕಾಡಿದ್ದ ಅಭಿಷೇಕ್, ಡ್ರಾಯರ್‌ನಲ್ಲಿಟ್ಟಿದ್ದ ಚಿನ್ನದ ಬಳೆ ಹಾಗೂ ಉಂಗುರಗಳನ್ನು ಕದ್ದಿಟ್ಟು ಕೊಂಡಿದ್ದ. ಈ ಸಂಗತಿ ಸಹೋದ್ಯೋಗಿಗೂ ಗೊತ್ತಾಗಿರಲಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು