ಬೆಂಗಳೂರು: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದ ಯಲಹಂಕ ಸಮೀಪದ ಮೇಲ್ಸೇತುವೆ ಬಳಿ ಸೋಮವಾರ ತಡರಾತ್ರಿ ಇನೋವಾ ಕಾರು, ಕಾಂಕ್ರೀಟ್ ಮಿಶ್ರಣದ ಲಾರಿ ಹಾಗೂ ಬಿಎಂಟಿಸಿ ಬಸ್ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಲಾರಿ ಹಾಗೂ ಕಾರಿನ ಚಾಲಕರು ಮೃತಪಟ್ಟಿದ್ದಾರೆ.

ಲಾರಿ ಚಾಲಕ, ಉತ್ತರ ಪ್ರದೇಶದ ಕುಲದೀಪ್ ಕುಮಾರ್ (42) ಹಾಗೂ ಬಾದಾಮಿ ತಾಲ್ಲೂಕಿನವರಾದ ಕಾರು ಚಾಲಕ ಜಗದೀಶ್ (40) ಮೃತಪಟ್ಟವರು.

ಬಸ್ ಚಾಲಕ ಪುಟ್ಟಸ್ವಾಮಿ ಅವರ ಕೈ ಹಾಗೂ ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

‘ಇನೋವಾ ಕಾರಿನ ಮಾಲೀಕರು ದುಬೈನಲ್ಲಿ ನೆಲಸಿದ್ದು, ಅವರು ವಿಮಾನದ ಮೂಲಕ ಬೆಂಗಳೂರಿಗೆ ಸೋಮವಾರ ತಡರಾತ್ರಿ ಬರುತ್ತಿದ್ದರು. ಅವರನ್ನು ವಿಮಾನ ನಿಲ್ದಾಣದಿಂದ ಮನೆಗೆ ಕರೆತರಲು ಜಗದೀಶ್ ಅವರು ಕಾರಿನಲ್ಲಿ ತೆರಳುತ್ತಿದ್ದರು. ರಾತ್ರಿ 11.30ರ ಸುಮಾರಿಗೆ ಕಾಂಕ್ರೀಟ್ ಮಿಶ್ರಣ ಮಾಡುವ ಲಾರಿಯೂ ದೇವನಹಳ್ಳಿಯತ್ತ ಸಾಗುತ್ತಿತ್ತು. ಜಿ.ಕೆ.ವಿ.ಕೆ ಮೇಲ್ಸೇತುವೆ ಬಳಿ ಇಳಿಮುಖ ರಸ್ತೆಯ ಬಲಭಾಗದಲ್ಲಿ ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಬಲಭಾಗಕ್ಕೆ ವಾಹನ ನಿಲುಗಡೆ ಮಾಡಿ ಕೆಳಕ್ಕೆ ಇಳಿದಿದ್ದ ಇಬ್ಬರೂ ಚಾಲಕರು, ಪರಸ್ಪರ ಗಲಾಟೆಯಲ್ಲಿ ತೊಡಗಿದ್ದರು. ಎರಡೂ ವಾಹನಗಳ ಮಧ್ಯೆ ಚಾಲಕರು ನಿಂತಿದ್ದರು’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

‘ಅದೇ ವೇಳೆಗೆ ರಾಜರಾಜೇಶ್ವರಿ ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ಬಿಎಂಟಿಸಿ ವೋಲ್ವೊ ಬಸ್, ಬಲಭಾಗದಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿ ಮುಂದಕ್ಕೆ ಚಲಿಸಿ, ಚಾಲಕರಿಗೆ ಡಿಕ್ಕಿ ಹೊಡೆದಿದೆ’ ಎಂದು ಪೊಲೀಸರು ತಿಳಿಸಿದರು.

‘ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕ ಜಗದೀಶ್ ಅವರನ್ನು ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಲ್ಲಿ ಮೃತಪಟ್ಟಿದ್ದಾರೆ. ಬಸ್ ಚಾಲಕ ಪುಟ್ಟಸ್ವಾಮಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಅವೈಜ್ಞಾನಿಕ ನಿಲುಗಡೆ: ಎರಡೂ ವಾಹನಗಳನ್ನು ಅವೈಜ್ಞಾನಿಕ ರೀತಿಯಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿಕೊಂಡು ಮಾತಿನ ಚಕಿಮಕಿಯಲ್ಲಿ ಚಾಲಕರು ತೊಡಗಿದ್ದರು. ಸ್ಥಳದಲ್ಲಿ ಕತ್ತಲಿನ ವಾತಾವರಣ ಇತ್ತು. ಕತ್ತಲಿದ್ದ ಕಾರಣಕ್ಕೆ ಬಸ್ ಚಾಲಕ ಸಮೀಪಕ್ಕೆ ಬಂದ ಮೇಲೆ ನಿಂತಿದ್ದ ವಾಹನವನ್ನು ಗಮನಿಸಿದ್ದರು. ಬಸ್ ನಿಯಂತ್ರಿಸಲಾಗದೇ ಸರಣಿ ಅಪಘಾತವಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ನಲ್ಲಿ ಒಬ್ಬರು ಮಾತ್ರ ಪ್ರಯಾಣಿಸುತ್ತಿದ್ದರು. ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತದ ಸ್ಥಳಕ್ಕೆ ಸಂಚಾರ ವಿಭಾಗದ ಪೊಲೀಸರು, ವೋಲ್ವೊ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ, ವಿಭಾಗೀಯ ಸಂಚಾರ ಅಧಿಕಾರಿಗಳು ಮತ್ತು ವಿಭಾಗೀಯ ಯಾಂತ್ರಿಕ ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿದರು.

ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.