ಬೆಂಗಳೂರು: ಮಿಲ್ಲರ್ ಮ್ಯೂಸಿಯಂ ಆಫ್ ಅನಾಮಾರ್ಫಿಕ್ ಆರ್ಟ್ ಭಾನುವಾರ ಕುಕ್ ಟೌನ್ನಲ್ಲಿ ಆರಂಭವಾಯಿತು.

ಮಿಲ್ಲರ್ ಮ್ಯೂಸಿಯಂ ಆಫ್ ಅನಾಮಾರ್ಫಿಕ್ ಆರ್ಟ್ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಚೆರಿಲ್ ಅನಿತಾ ಮಿಲ್ಲರ್ ಮಾತನಾಡಿ, ‘ಅನಾಮಾರ್ಫಿಕ್ ಕಲೆಯೆಂಬುದು ಬದಲಾಗುತ್ತಿರುವ ದೃಷ್ಟಿಕೋನಗಳಿಗೆ ಸಂಬಂಧಿಸಿದ್ದಾಗಿದೆ. ಒಂದು ಕೋನದಿಂದ ವಿರೂಪಗೊಂಡಂತೆ ಕಾಣುವ ಕಲಾಕೃತಿಗಳು ಇನ್ನೊಂದು ಕೋನದಿಂದ ನೋಡಿದಾಗ ಸೌಂದರ್ಯಯುತವಾಗಿ ಕಾಣುತ್ತವೆ. ನನ್ನ ತಾಯಿ ಶೆರೀನ್ ಮಿಲ್ಲರ್ ಅವರು ತನ್ನದೇ ಆದ ಪರಿಕಲ್ಪನೆಯಲ್ಲಿ ಇದನ್ನು ಪರಿಚಯಿಸಿದ್ದರು’ ಎಂದು ವಿವರಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಘ್, ಆಧುನಿಕ ಕಲೆಯ ರಾಷ್ಟ್ರೀಯ ಗ್ಯಾಲರಿಯ ಸಬ್ ಕ್ಯುರೇಟರ್ ದರ್ಶನ್ ಕುಮಾರ್ ವೈ.ಯು., ಕಲಾ ಇತಿಹಾಸಕಾರ ಆರ್.ಎಚ್.ಕುಲಕರ್ಣಿ ಭಾಗವಹಿಸಿದ್ದರು.

ಗಣಿತ, ವಿಜ್ಞಾನ ಮತ್ತು ಕಲಾತ್ಮಕತೆಯ ವಿಶಿಷ್ಟ ಮಿಶ್ರಣವಾದ ಅನಾಮಾರ್ಫಿಕ್ ಕಲೆಯ ಮೂಲಕ ಸೃಜನಶೀಲತೆಯನ್ನು ಪಸರಿಸುವ ಉದ್ದೇಶವನ್ನು ಈ ವಸ್ತುಸಂಗ್ರಹಾಲಯ ಹೊಂದಿದೆ. ಅನಾಮಾರ್ಫಿಕ್ ವರ್ಣಚಿತ್ರಗಳು, ಸರಿಯಲ್ ಶಿಲ್ಪಗಳು, ಕಲ್ಲಿದ್ದಲಿನ ಕೃತಿಗಳು ಮತ್ತು ಡಿಜಿಟಲ್ ಕಲೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ ಎಂದು ಅನಿತಾ ಮಿಲ್ಲರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.