ಬೆಂಗಳೂರು: ದೇಶದಲ್ಲಿ ಅಪ್ರೆಂಟಿಸ್ಶಿಪ್ಗೆ ಇರುವ ಸರ್ಕಾರಿ ಪೋರ್ಟಲ್ ಹ್ಯಾಕ್ ಮಾಡಿರುವ ಸೈಬರ್ ಕಳ್ಳರು, ಆರು ಅಭ್ಯರ್ಥಿಗಳ ಬ್ಯಾಂಕ್ ಖಾತೆಗಳನ್ನು ಬದಲಿಸಿ, ಹಣ ವಂಚಿಸಿದ್ದಾರೆ.

ಜನವರಿ 3 ಮತ್ತು ಜುಲೈ 4ರ ನಡುವೆ apprenticeshipindia.gov.in ಹ್ಯಾಕ್ ಆಗಿದ್ದು, ಅಭ್ಯರ್ಥಿಗಳಿಗೆ ಸೇರಿದ ₹1.46 ಲಕ್ಷ ವಂಚಿಸಲಾಗಿದೆ.

ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿರುವ ಪೋರ್ಟಲ್, ಅಭ್ಯರ್ಥಿಗಳಿಗೆ ಅಪ್ರೆಂಟಿಸ್ಶಿಪ್ಗೆ ನೋಂದಾಯಿಸಲು, ಅರ್ಜಿ ಸಲ್ಲಿಸಲು ಮತ್ತು ಸ್ಟೈಫಂಡ್ ಪಡೆಯಲು ಅನುವು ಮಾಡಿಕೊಡುತ್ತದೆ.

ಕಂಪನಿಗಳು ಈ ಪೋರ್ಟಲ್ ಬಳಸಿಕೊಂಡು ರಾಷ್ಟ್ರೀಯ ಶಿಷ್ಯವೃತ್ತಿ ಉತ್ತೇಜನ ಯೋಜನೆ (ಎನ್ಎಪಿಎಸ್) ಅಡಿ ಅಪ್ರೆಂಟಿಸ್ಗಳನ್ನು ಕರೆತರಬಹುದು ಮತ್ತು ಶೇಕಡ 25ರಷ್ಟು ಸ್ಟೈಫಂಡ್ ಮರುಪಾವತಿ (ಪ್ರತಿ ಅಪ್ರೆಂಟಿಸ್ಗೆ ತಿಂಗಳಿಗೆ ₹1,500 ವರೆಗೆ) ಪಡೆಯಬಹುದು.

ಬೆಂಗಳೂರಿನ ವಿಜಯನಗರದಲ್ಲಿರುವ ಕ್ಯಾಡ್ಮ್ಯಾಕ್ಸ್ ಸಲ್ಯೂಷನ್ ಎಜುಕೇಶನ್ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ನಿರ್ದೇಶಕ ಡಿ. ಅರುಣ್ ಕುಮಾರ್ ಅವರ ದೂರಿನ ಮೇರೆಗೆ ಜುಲೈ 26 ರಂದು ಪಶ್ಚಿಮ ವಿಭಾಗದ ಸೈಬರ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

‘ಜನವರಿ 3ರಿಂದ ಜುಲೈ 4ರ ನಡುವೆ, ಅಪರಿಚಿತ ವ್ಯಕ್ತಿಗಳು ಪೋರ್ಟಲ್ ಹ್ಯಾಕ್ ಮಾಡಿ, ತಮ್ಮ ಆರು ಅಭ್ಯರ್ಥಿಗಳ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿದ್ದಾರೆ. ನಂತರ, ಅಭ್ಯರ್ಥಿಗಳಿಗೆ ಬಾಕಿ ಇದ್ದ ₹1,46,073 ಅನ್ನು ಎಚ್ಡಿಎಫ್ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಎನ್ಎಸ್ಡಿಎಲ್ ಪೇಮೆಂಟ್ಸ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ’ ಎಂದು 39 ವರ್ಷದ ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿರುವ ಸೈಬರ್ ಪೊಲೀಸರು, ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಕೋರಿದ್ದಾರೆ. ಅಲ್ಲದೇ ಪ್ರವೇಶ ದಾಖಲೆಗಳು, ಐ.ಪಿ ವಿಳಾಸ ವಿವರಗಳನ್ನು ಸಹ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.