ಬೆಂಗಳೂರು: ಚಿಕಿತ್ಸೆಗೆಂದು ಬಂದಿದ್ದ 21 ವರ್ಷದ ಯುವತಿಯ ಜತೆಗೆ ಅನುಚಿತವಾಗಿ ವರ್ತಿಸಿದ್ದ ಆರೋಪದಡಿ ವೈದ್ಯ, ಚರ್ಮರೋಗ ತಜ್ಞ ಪ್ರವೀಣ್ ಅವರನ್ನು ಅಶೋಕನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನಗರದ ಆಸ್ಟೀನ್ ಟೌನ್ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಪ್ರವೀಣ್, ಯುವತಿ ಚಿಕಿತ್ಸೆಗೆ ಬಂದಿದ್ದ ಸಂದರ್ಭದಲ್ಲಿ ಅವರ ಜತೆಗೆ ಅನುಚಿತ ವರ್ತನೆ ತೋರಿದ್ದರು. ಯುವತಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ದೂರಿನಲ್ಲಿ ಏನಿದೆ?: ‘ಅ.18ರಂದು ಸಂಜೆ 7 ಗಂಟೆಗೆ ಯುವತಿ ಕ್ಲಿನಿಕ್ಗೆ ಬಂದಿದ್ದರು. ಆ ಸಮಯದಲ್ಲಿ ವೈದ್ಯರು ಪರೀಕ್ಷೆಯ ನೆಪದಲ್ಲಿ ಯುವತಿಯ ಬಟ್ಟೆ ಬಿಚ್ಚಿಸಿ ಮುತ್ತು ನೀಡಿದ್ದಾರೆ. ಅಲ್ಲದೇ, ಪ್ರತ್ಯೇಕ ರೂಂ ಮಾಡುತ್ತೇನೆ. ಸಹಕಾರ ನೀಡಬೇಕು ಎಂಬುದಾಗಿ ಬೆದರಿಕೆ ಹಾಕಿದ್ದರು’ ಎಂದು ನೀಡಿದ ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

‘ದುರುದ್ದೇಶದಿಂದ ನನ್ನ ದೇಹದ ವಿವಿಧ ಭಾಗಗಳನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಯುವತಿ ದೂರಿನಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.