ಬೆಂಗಳೂರು: ನರ್ತಿಸುತ್ತಿರುವ, ಮಲಗಿರುವ ಸೇರಿ ಹಲವು ಭಂಗಿಗಳ ಹಾಗೂ ವಿವಿಧ ವಿನ್ಯಾಸದ 50ಕ್ಕೂ ಅಧಿಕ ಗಣೇಶನನ್ನು ಒಂದೇ ಸೂರಿನಡಿ ಕಣ್ತುಂಬಿಕೊಳ್ಳಬಹುದಾಗಿದೆ.

ಕಲಾವಿದರು ಗಣೇಶನ ಬಗೆಗಿನ ತಮ್ಮ ಪರಿಕಲ್ಪನೆಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಿದ್ದು, ಪಂಚಮುಖಿ ಸೇರಿ ವಿಶಿಷ್ಟ ರೂಪಗಳು ಕ್ಯಾನ್ವಾಸ್ ಮೇಲೆ ಮೂಡಿವೆ. ಗಣೇಶ ಚತುರ್ಥಿ ಪ್ರಯುಕ್ತ ಆಕಾಂಕ್ಷಾ ಕಲಾವಿದರ ಸಮೂಹವು ‘ವಕ್ರತುಂಡ ಮಹಾಕಾಯ’ ಶೀರ್ಷಿಕೆಯಡಿ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ (ಐಐಡಬ್ಲ್ಯುಸಿ) ಚಿತ್ರಕಲಾ ಪ್ರದರ್ಶನವನ್ನು ನಡೆಸುತ್ತಿದೆ. ಇದೇ 24ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ 50ಕ್ಕೂ ಅಧಿಕ ಕಲಾವಿದರು ರಚಿಸಿದ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಇದರಿಂದಾಗಿ ಕಲಾ ಪ್ರೇಮಿಗಳು ಒಂದೇ ಸೂರಿನಡಿ ಗಣೇಶನ ವಿವಿಧ ಕಲಾಕೃತಿಗಳನ್ನು ವೀಕ್ಷಿಸಬಹುದಾಗಿದೆ.

ತಂಡವು ಇದೇ ಮೊದಲ ಬಾರಿ ಗಣೇಶನ ಕಲಾಕೃತಿಗಳ ಪ್ರದರ್ಶನವನ್ನು ನಡೆಸುತ್ತಿದೆ. ವಿವಿಧ ಅಳತೆಯ ಕಲಾಕೃತಿಗಳಿದ್ದು, ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ದರ ₹ 1 ಸಾವಿರದಿಂದ ಪ್ರಾರಂಭವಾಗಲಿದೆ. 3x4 ಅಡಿ ಅಳತೆಯ ಪಂಚಮುಖಿ ಗಣೇಶನ ಕಲಾಕೃತಿಗೆ ₹ 2 ಲಕ್ಷ ನಿಗದಿಪಡಿಸಲಾಗಿದ್ದು, ಇದು ಪ್ರದರ್ಶನದಲ್ಲಿ ಇರಿಸಲಾದ ಕಲಾಕೃತಿಗಳಲ್ಲಿ ಗರಿಷ್ಠ ಮೌಲ್ಯ ಹೊಂದಿದೆ.

‘ಕಲಾ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ಮಾಧ್ಯಮಗಳಲ್ಲಿ ಕಲಾಕೃತಿಗಳನ್ನು ರಚಿಸಲಾಗಿದೆ. ಈಗಾಗಲೇ ಕೆಲ ಕಲಾಕೃತಿಗಳನ್ನು ಕಲಾ ರಸಿಕರು ಕಾಯ್ದಿರಿಸಿದ್ದಾರೆ. ಗಣೇಶ ಚತುರ್ಥಿಗೆ 21 ಗಣೇಶನನ್ನು ನೋಡಬೇಕೆಂಬ ಪ್ರತೀತಿ ಇದೆ. ಆದರೆ, ಇಲ್ಲಿ 50ಕ್ಕೂ ಅಧಿಕ ಗಣೇಶನನ್ನು ನೋಡಬಹುದು. ಪ್ರತಿಯೊಂದು ಭಿನ್ನವಾಗಿದೆ’ ಎಂದು ಕಲಾವಿದರು ವಿವರಿಸಿದರು.

‘10 ವರ್ಷಗಳಿಂದ ಕಲಾಕೃತಿಗಳ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಸುಕೊಂಡು ಬಂದಿದ್ದೇವೆ. ಇದೇ ಮೊದಲ ಬಾರಿ ಗಣೇಶನಿಗೆ ಸಂಬಂಧಿಸಿದ ಕಲಾಕೃತಿಗಳ ಪ್ರದರ್ಶನ ನಡೆಸುತ್ತಿದ್ದೇವೆ. 75ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಐಐಡಬ್ಲ್ಯುಸಿಗೆ ಹಲವು ಖ್ಯಾತ ನಾಮರು ಭೇಟಿ ನೀಡಿದ್ದಾರೆ. ಹಾಗಾಗಿ, ಇಲ್ಲಿ ಈ ಬಾರಿ ಪ್ರದರ್ಶನ ಆಯೋಜಿಸಿದ್ದೇವೆ. ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಪಶ್ಚಿಮ ಬಂಗಾಳ, ಒಡಿಶಾ ಸೇರಿ ಹಲವು ರಾಜ್ಯಗಳ ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಬಹುತೇಕ ಕಲಾವಿದರು ಮಹಿಳೆಯರಾಗಿದ್ದಾರೆ’ ಎಂದು ಆಕಾಂಕ್ಷಾ ಕಲಾವಿದರ ಸಮೂಹದ ಸಂಸ್ಥಾಪಕಿ ಶ್ಯಾಮಲಾ ರಾಮಾನಂದ ತಿಳಿಸಿದರು.

ಕಲಾ ಪ್ರದರ್ಶನದ ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7

58 ಕಲಾವಿದರಿಂದ ಪ್ರದರ್ಶನ

ಜಗದೀಶ್ ಕಡೂರು ಉಷಾ ಶಾಂತಾರಾಮ್ ಶೇಖರ್ ಬಳ್ಳಾರಿ ರಘು ಪುತ್ತೂರು ಶಿವಯೋಗಿ ಬನಾನಿ ಕುಂದು ಬಿಜಿ ನಾಗೇಶ್ ಜೋಶೀಲಾ ಎಸ್.ವಿ. ವಿ. ಜಯಶ್ರೀ ವಿದ್ಯಾ ವಿಶ್ವನಾಥ್ ಲಾಸ್ಯ ಉಪಾಧ್ಯಾಯ ಜಯ ದ್ವಿವೇದಿ ಪ್ರಮೀಳಾ ದಾಸ್ ಲವ್ಲಿ ಅಗರವಾಲ್ ಜಯಂತಿ ಭಟ್ಟಾಚಾರ್ ಜಯಶ್ರೀ ಮಹಾಪಾತ್ರ ಅನುಪಮಾ ಪಿ.ಜಿ. ತುಹಿನಾ ರೂಪೇಶ್ ವೀಣಾ ಪ್ರಿಯರಂಜನ್ ಸುವಿಧಾ ಬೋಳಾರ್ ಆಶಾ ವಿವೇಕ್ ಮಧುಬಾಲ ಭೋಸಲೆ ಪೂಜಾ ರಾಯ್ಕರ್ ಸುಭದ್ರ ಸರ್ಕಾರ್ ಶ್ಯಾಮಲಾ ವೆಂಕಟೇಶ್ ಮಂಗಳ ಮಧುಚಂದ್ ಸುಬ್ರತಾ ಸುದರ್ಶಿನಿ ಬೆಹೆರಾ ರಿತು ಸೋಂಧ್ ಪ್ರಿಯಾ ಸತೀಶ್ ಶ್ವೇತಪದ್ಮ ಮಾಝಿ ಸೌಮ್ಯ ಮುರಳಿ ವೈಶಾಲಿ ಗೋಯೆಲ್ ಸೌಮ್ಯಾ ಪಾಠಕ್ ರೋಹಿಣಿ ರಾವ್ ಸಂಹಿತಾ ದಾಸ್ ಬಿನಿತಾ ಶೋಮ್ ವೋರಾ ವಿಧು ಪಿಳ್ಳೈ ಚೇತನ್ ಎಸ್. ಉಷಾ ರೈ ರೂಪಾ ಲಕ್ಷ್ಮಿ ಸುನಂದಾ ಚಕ್ರವರ್ತಿ ಪ್ರಭಾ ಪಂಥ್ ರಾಣಿ ಭಾಸ್ಕರ್ ಗೀತಾ ಮಹೇಶ್ ಪ್ರಿಯಾ ಮಣಿಕಂಡನ್ ಉಮಾ ಆದವ್ ಸ್ನೇಹಾ ಮುರಳೀಧರ್ ಕವಿತಾ ಕುಮಾರ್ ಗೀತಾ ಶಂಕರ್ ಮೋನಿಕಾ ಗುಪ್ತಾ ಶ್ಯಾಮಲಾ ರಮಾನಂದ್ ನಂದಿನಿ ಕಮಲಾಕರ್ ಸಂಜಯ್ ಚಾಪೋಲ್ಕರ್ ಜನನಿ ವಿನೋತ್ ಸೌಮ್ಯ ಬೀನಾ ವೇದಾ ಶ್ರೀರಾಮ್ ಜಾಹ್ನವಿ ಆಯಾಚಿತಮ್ ರಂಜಿನಿ ರಮೇಶ್ ಹಾಗೂ ಆರತಿ ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.