ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: 156 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ
Published 3 ಮಾರ್ಚ್ 2024, 13:51 IST
Last Updated 3 ಮಾರ್ಚ್ 2024, 13:51 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವವು ಇದೇ 4ರಂದು ನಡೆಯಲಿದ್ದು, ಈ ವರ್ಷ 156 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಚಿನ್ನದ ಪದಕ ಪ್ರಶಸ್ತಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ.ಸುರೇಶ ಮಾಹಿತಿ ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು, ‘63 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ 53 ಚಿನ್ನದ ಪದಕ ಹಾಗೂ ದಾನಿಗಳ 81 ಚಿನ್ನದ ಪದಕ, 22 ವಿದ್ಯಾರ್ಥಿಗಳಿಗೆ ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು’ ಎಂದು ತಿಳಿಸಿದರು.

‘ಬೆಳಿಗ್ಗೆ 11.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ವಹಿಸಲಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪದಕ ಪ್ರದಾನ ಮಾಡಲಿದ್ದು, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಮಹಾನಿರ್ದೇಶಕ ಹಿಮಾಂಶು ಪಾಠಕ್ ಅವರು ಘಟಿಕೋತ್ಸವದ ಪ್ರಧಾನ ಭಾಷಣ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಪಿಎಚ್‌.ಡಿಯಲ್ಲಿ ಒಟ್ಟು 29 ಚಿನ್ನದ ಪದಕಗಳು ಪ್ರದಾನ ಮಾಡಲಿದ್ದು, ಅದರಲ್ಲಿ 12 ವಿದ್ಯಾರ್ಥಿನಿಯರು ಹಾಗೂ 4 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯದ 15 ಚಿನ್ನದ ಪದಕಗಳನ್ನು, 10 ದಾನಿಗಳ ಚಿನ್ನದ ಪದಕಗಳು ಹಾಗೂ 4 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 69 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಅದರಲ್ಲಿ 24 ವಿದ್ಯಾರ್ಥಿನಿಯರು ಹಾಗೂ 6 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯ ನೀಡುವ 22 ಚಿನ್ನದ ಪದಕಗಳು ಹಾಗೂ 5 ಆವರಣದ ಚಿನ್ನದ ಪದಕಗಳನ್ನು, 31 ದಾನಿಗಳ ಚಿನ್ನದ ಪದಕಗಳು ಹಾಗೂ 11 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ’ ಎಂದು
ಹೇಳಿದರು.

‘ಸ್ನಾತಕ ಪದವಿಯಲ್ಲಿ 58 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಅದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ 4 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯ ನೀಡುವ 6 ಚಿನ್ನದ ಪದಕಗಳು, 4 ಆವರಣದ ಚಿನ್ನದ ಪದಕಗಳು, 40 ದಾನಿಗಳ ಚಿನ್ನದ ಪದಕಗಳು, 1 ಕೃಷಿ ವಿಶ್ವವಿದ್ಯಾಲಯದ ಕ್ರೀಡಾ ಚಿನ್ನದ ಪದಕ ಹಾಗೂ 7 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು’ ಎಂದರು.

ಶಿಕ್ಷಣ ನಿರ್ದೇಶಕ ಕೆ.ಸಿ.ನಾರಾಯಣಸ್ವಾಮಿ, ಕುಲಸಚಿವ ಬಸವೇಗೌಡ, ವಿಸ್ತರಣಾ ನಿರ್ದೇಶಕ ವಿ.ಎಲ್. ಮಧುಪ್ರಸಾದ್
ಭಾಗವಹಿಸಿದ್ದರು.

ಎಸ್. ಸ್ನೇಹಶ್ರೀ
ಎಸ್. ಸ್ನೇಹಶ್ರೀ
..
..

ರೈತ ರಂಗಸ್ವಾಮಿಗೆ ಗೌರವ ಡಾಕ್ಟರೇಟ್‌

‘ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗೆ ಗ್ರಾಮದ ಪ್ರಗತಿಪರ ರೈತ ಎಂ.ಸಿ. ರಂಗಸ್ವಾಮಿ ಅವರು ಕೃಷಿಯಲ್ಲಿ ಅಳವಡಿಸಿಕೊಂಡಿರುವ ನೂತನ ತಂತ್ರಜ್ಞಾನ ಮತ್ತು ಸಮಗ್ರ ಕೃಷಿ ಬೇಸಾಯ ಪದ್ಧತಿಯನ್ನು ಗುರುತಿಸಿ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಲಾಗುವುದು’ ಎಂದು ಎಸ್.ವಿ. ಸುರೇಶ ಮಾಹಿತಿ ನೀಡಿದರು.

ಎಸ್. ಸ್ನೇಹಶ್ರೀಗೆ 13 ಚಿನ್ನದ ಪದಕ

ಬಿಎಸ್‌ಸಿ (ಆನರ್ಸ್‌) ಕೃಷಿಯಲ್ಲಿ ಎಸ್. ಸ್ನೇಹಶ್ರೀ ಅವರಿಗೆ ಒಟ್ಟು 13 ಪದಗಳನ್ನು ಗಳಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯದ 1 ಚಿನ್ನದ ಪದಕ ದಾನಿಗಳ 9 ಚಿನ್ನದ ಹಾಗೂ ದಾನಿಗಳ 3 ಚಿನ್ನದ ಪದಕಗಳ ಪ್ರಮಾಣ ಪತ್ರಗಳನ್ನು ಗಳಿಸಿದ್ದಾರೆ.

ಪದವಿ ವಿವರ

ಸ್ನಾತಕ ಪದವಿ: 870 ಸ್ನಾತಕೋತ್ತರ ಪದವಿ: 291 ಪಿಎಚ್‌.ಡಿ: 83 ಒಟ್ಟು ವಿದ್ಯಾರ್ಥಿಗಳು: 1244 ಚಿನ್ನದ ಪದ ಪಿ.ಎಚ್‌ಡಿ:  29 ಸ್ನಾತಕೋತ್ತರ ಪದವಿ: 69 ಪದವಿ ವಿಭಾಗ: 58

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT