ಬೆಂಗಳೂರು: ಫ್ರೆಂಚ್ ಇತಿಹಾಸವಿರುವ ‘ಬ್ಯಾಸ್ಟಿಲ್ ಡೇ’ಯನ್ನು ಮುಂದಿನ ವರ್ಷ ಬೆಂಗಳೂರು ನಗರದಲ್ಲಿ ಆಚರಿಸಲಾಗುವುದು ಎಂದು ಫ್ರಾನ್ಸ್ನ ರಾಯಭಾರಿ ಮಾರ್ಕ್ ಲ್ಯಾಮಿ ತಿಳಿಸಿದರು.

ನಗರದ ‘ಅಲಯನ್ಸ್ ಫ್ರಾನ್ಸೈಸ್’ನಲ್ಲಿ ಬುಧವಾರ ‘ವಚನಾಸ್ ಇನ್ ಫ್ರೆಂಚ್’ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಬೆಂಗಳೂರಿನಲ್ಲಿ ಬ್ಯಾಸ್ಟಿಲ್ ಡೇ ಆಚರಣೆಯ ಪರವಾಗಿದ್ದೇನೆ. ಈ ಕಾರ್ಯಕ್ರಮದ ರೂಪರೇಷೆ ತಯಾರಿಸಲಾಗುವುದು. ಕಾರ್ಯಕ್ರಮಕ್ಕಾಗಿ ವ್ಯವಸ್ಥಾಪನಾ ಸಿದ್ಧತೆ ಮತ್ತು ಭದ್ರತಾ ಸಿದ್ಧತೆಗಳನ್ನು ರೂಪಿಸಬೇಕಿದೆ’ ಎಂದು ಹೇಳಿದರು.

‘ಭಾರತ ಮತ್ತು ಫ್ರಾನ್ಸ್ ಸಂಬಂಧಗಳು ಹಿಂದಿನಿಂದಲೂ ಅತ್ಯುತ್ತಮ ಸ್ಥಿತಿಯಲ್ಲಿದೆ. ಈ ಕಾರ್ಯಕ್ರಮ ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಬಂಧವನ್ನು ಬಲಪಡಿಸುತ್ತದೆ’ ಎಂದು ತಿಳಿಸಿದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ‘ಬಸವಣ್ಣರ ವಚನಗಳಲ್ಲಿ ಇರುವ ಅಂತಃಶಕ್ತಿಯು ಅವುಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸಿದೆ’ ಎಂದರು.

‘ಭಾರತ-ಫ್ರಾನ್ಸ್ ನಡುವಿನ ಎಲ್ಲ ಕ್ಷೇತ್ರಗಳಲ್ಲಿ ಸಂಬಂಧವನ್ನು ಬಲಪಡಿಸಲು ಅಲಯನ್ಸ್ ಫ್ರಾನ್ಸೆಸ್ ಸದಾ ಪ್ರಯತ್ನಿಸುತ್ತದೆ’ ಎಂದು ಅಲಯನ್ಸ್ ಫ್ರಾನ್ಸೆಸ್ ಅಧ್ಯಕ್ಷ ಚಿನ್ಮಯ ಚಿಗಟೇರಿ ಹೇಳಿದರು.

ಗಾಯಕಿ ಎಂ.ಡಿ. ಪಲ್ಲವಿ ವಚನಗಳನ್ನು ಹಾಡಿದರು. ರಜನಿ ಶಿವರಾಮ ಅವರು ವಚನಗಳನ್ನು ಕನ್ನಡ ಮತ್ತು ಫ್ರೆಂಚ್ ಎರಡೂ ಭಾಷೆಗಳಲ್ಲಿ ಹಾಡಿದರು. ಅಲಯನ್ಸ್ ಫ್ರಾನ್ಸೆಸ್ ನಿರ್ದೇಶಕ ಜೀನ್ ಮಾರ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.