ಗುರುವಾರ , ಜೂನ್ 17, 2021
22 °C

70 ವರ್ಷದ ಮಹಿಳೆ ಕತ್ತು ಕೊಯ್ದು ₹45 ಲಕ್ಷ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Crime News

ಬೆಂಗಳೂರು: ಕಾಡುಗೋಡಿ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಜಯಮ್ಮ (70) ಎಂಬುವರನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಮನೆಯಲ್ಲಿದ್ದ ₹ 45 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

‘ಚನ್ನಚಂದ್ರದ ಕಾಳಪ್ಪ ಲೇಔಟ್‌ ನಲ್ಲಿ ಆಗಸ್ಟ್ 12ರಂದು ಈ ಘಟನೆ ನಡೆದಿದೆ. ಮನೆಯಲ್ಲಿ ಜಯಮ್ಮ ಒಬ್ಬರೇ ಇರುವಾಗ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಕೊಲೆ ಹಾಗೂ ದರೋಡೆ ಸಂಬಂಧ ಪತಿ ಅಪ್ಪಯ್ಯಣ್ಣ ದೂರು ನೀಡಿದ್ದಾರೆ’ ಎಂದು ಕಾಡುಗೋಡಿ ಪೊಲೀಸರು ಹೇಳಿದರು. ‘ವಿದ್ಯುತ್ ಬಿಲ್ ಪಾವತಿಸಲೆಂದು ಆ. 12ರಂದು ಬೆಳಿಗ್ಗೆ 10.30ರ ಸುಮಾರಿಗೆ ಅಯ್ಯಪ್ಪಣ್ಣ, ಮನೆಯಿಂದ ಹೊರಗೆ ಹೋಗಿದ್ದರು. ಮಧ್ಯಾಹ್ನ 1.15ರ ಸುಮಾರಿಗೆ ಮನೆಗೆ ವಾಪಸು ಬಂದಿದ್ದರು. ಪತ್ನಿ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ಇದ್ದದ್ದನ್ನು ಕಂಡಿದ್ದರು.’ ‘ಮನೆಯಲ್ಲಿದ್ದ ಟಿ.ವಿ. ಆನ್‌ ಆಗಿತ್ತು. ಮಂಚದ ಕೆಳಗಿದ್ದ ಕಬ್ಬಿಣದ ಟ್ರಂಕ್‌ಗಳನ್ನು ಹೊರಗೆ ತೆಗೆದು ಎಲ್ಲೆಂ ದರಲ್ಲಿ ಬಿಸಾಡಲಾಗಿತ್ತು. ಅದರಲ್ಲಿದ್ದ ₹ 45 ಲಕ್ಷ ನಗದು ಇರಲಿಲ್ಲ. ಜಯಮ್ಮ ಅವರ ಕತ್ತನ್ನು ಆರೋಪಿಗಳು ಕೊಯ್ದಿ ದ್ದರು. ಪರಿಚಯಸ್ಥರೇ ಶಾಮೀಲಾಗಿ ಕೃತ್ಯ ಎಸಗಿರುವ ಅನುಮಾನ ಇದೆ’ ಎಂದೂ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.