ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ: ನಗದು, ಡ್ರ್ಯಾಗರ್‌ಗಳು ಜಪ್ತಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹಲವು ರೌಡಿಗಳ ಮನೆ ಮೇಲೆ‌ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ನಗದು ಹಾಗೂ ಡ್ರ್ಯಾಗರ್ ಜಪ್ತಿ ಮಾಡಿದ್ದಾರೆ.

ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ್, ಸೈಕಲ್ ರವಿ, ಸೈಲೆಂಟ್ ಸುನೀಲ್ ಹಾಗೂ ಜೆಸಿಬಿ ನಾರಾಯಣ ಹಾಗೂ ಅವರ ಸಹಚರರದ್ದು ಸೇರಿ 45 ಮನೆಗಳ ಮೇಲೆ ದಾಳಿ ಆಗಿದೆ.

ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹಾಗೂ ಡಿಸಿಪಿಗಳ ನೇತೃತ್ವದ ತಂಡಗಳು ದಾಳಿ ನಡೆಸಿವೆ.

‘ರೌಡಿಯೊಬ್ಬನ ಮನೆಯಲ್ಲಿ ₹2 ಲಕ್ಷ ನಗದು ಹಾಗೂ ಡ್ರ್ಯಾಗರ್‌ಗಳು ಪತ್ತೆಯಾಗಿವೆ. ಜೊತೆಗೆ, ಆಧಾರ್ ಕಾರ್ಡ್‌ಗಳು ಸಿಕ್ಕಿವೆ. ಅವು ನಕಲಿಯೋ ಅಥವಾ ಅಸಲಿಯೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ಇತ್ತೀಚೆಗಷ್ಟೇ ನಗರದ ರೌಡಿಗಳು ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ‌ ಪೊಲೀಸರು ದಾಳಿ‌ ಮಾಡಿದ್ದರು. ಈಗ ಮತ್ತೆ ರೌಡಿ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು