ಬೆಂಗಳೂರು: ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರ ಇ–ಮೇಲ್ಗೆ ಮತ್ತೆ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ಕೇಂದ್ರ ಸೈಬರ್ ಅಪರಾಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಎಂ.ರಾಜೇಶ್ವರಿ ಅವರು ನೀಡಿದ ದೂರು ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಸಿ) ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 351(4), 353(1)(ಬಿ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಪೊಲೀಸರು ಹೇಳಿದರು.

ಜೂನ್ 9, 24 ಹಾಗೂ ಜುಲೈ 25ರಂದು ಪ್ರತ್ಯೇಕ ಇ–ಮೇಲ್ಗಳಿಂದ ಬೆದರಿಕೆ ಸಂದೇಶಗಳು ಬಂದಿದ್ದವು. ಆ ಮೂರು ಇ–ಮೇಲ್ಗಳಿಗೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಬುಧವಾರ ಮತ್ತೆ ಅದೇ ಮಾದರಿಯಲ್ಲಿ ಬೇರೊಂದು ಇ–ಮೇಲ್ನಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ರಿಜಿಸ್ಟ್ರಾರ್ ಜನರಲ್ ಅವರ ಇ-ಮೇಲ್ ವಿಳಾಸಕ್ಕೆ ಬಂದಿದ್ದ ಬೆದರಿಕೆ ಸಂದೇಶದಲ್ಲಿ ‘ಮೂರು ಆರ್ಡಿಎಕ್ಸ್ ಬಾಂಬ್ಗಳನ್ನು ಹೈಕೋರ್ಟ್ನ ಆವರಣದಲ್ಲಿ ಇಡಲಾಗಿದೆ. ಕೂಡಲೇ ನ್ಯಾಯಾಮೂರ್ತಿಗಳನ್ನು ಹೊರಗಡೆ ಕಳುಹಿಸುವಂತೆ ಸಂದೇಶದಲ್ಲಿಉಲ್ಲೇಖಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.