ಬೆಂಗಳೂರು: ಬೇಸಿಗೆ ಧಗೆ ಏರುತ್ತಿರುವಂತೆಯೇ ನಗರದ ಹೊರವಲಯದಲ್ಲಿರುವ ಬಡಾವಣೆಗಳಲ್ಲಿ ನೀರಿನ ಟ್ಯಾಂಕರ್ಗಳ ಓಡಾಟ ಜೋರಾಗಿದೆ. ಖಾಸಗಿ ಟ್ಯಾಂಕರ್ಗಳ ಮಾಲೀಕರು ನೀರಿಗೆ ಮನಸೋ ಇಚ್ಛೆ ದರ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳೂ ಕೇಳಿಬರುತ್ತಿವೆ.

ಕಳೆದ ವರ್ಷ ಇದೇ ಅವಧಿಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿ, ಟ್ಯಾಂಕರ್ ನೀರು ದುಬಾರಿಯಾಗಿತ್ತು. ಆಗ ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ದೂರು ನೀಡಿದ್ದರು. ನಂತ ಜಲಮಂಡಳಿ, ಇಂತಿಷ್ಟು ಲೀಟರ್ ನೀರಿಗೆ ಇಷ್ಟೇ ಬೆಲೆ ಎಂದು ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆದರೆ, ಈ ವರ್ಷವೂ ಟ್ಯಾಂಕರ್ ನೀರಿನ ದರ ನಿಧಾನವಾಗಿ ಏರಿಕೆಯಾಗುತ್ತಿದ್ದು, ಜಲಮಂಡಳಿಯಾಗಲಿ, ಜಿಲ್ಲಾಡಳಿತವಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ನಾಗಕರಿಕರ ದೂರು.

ಪೀಣ್ಯ, ದಾಸರಹಳ್ಳಿ ಹಾಗೂ ಬೆಂಗಳೂರಿನ ಪೂರ್ವ ತಾಲ್ಲೂಕಿನ ಮಹದೇವಪುರ, ಕೆ.ಆರ್.ಪುರ, ರಾಮಮೂರ್ತಿ ನಗರ, ವೈಟ್ಫೀಲ್ಡ್ ಭಾಗದಲ್ಲಿ 5,500 ಲೀಟರ್ ನೀರಿನ ಒಂದು ಟ್ಯಾಂಕರ್ಗೆ ₹750ರವರೆಗೂ ಹಣ ಪಡೆಯಲಾಗುತ್ತಿದೆ.

‘ಹೆಗ್ಗನಹಳ್ಳಿ ಕ್ರಾಸ್, ಲಕ್ಷ್ಮಣನಗರ, ಗಜಾನನನಗರ, ಮುದ್ದೂರಮ್ಮ ಬಡಾವಣೆ, ಲಗ್ಗೆರೆ, ಪ್ರೀತಿನಗರ, ಲಕ್ಷ್ಮೀದೇವಿನಗರ, ಸುಂಕದಕಟ್ಟೆ, ಮುತ್ತರಾಯನಗರ, ಶ್ರೀನಿವಾಸನಗರ ವ್ಯಾಪ್ತಿಯಲ್ಲಿ ಟ್ಯಾಂಕರ್ ಮಾಲೀಕರೇ ನೀರಿನ ಬೆಲೆ ಹೆಚ್ಚಿಸಿದ್ದಾರೆ. ಕೆಲವೊಮ್ಮೆ ಟ್ಯಾಂಕರ್ಗೆ ₹700ರಿಂದ ₹750 ಹಣಕೊಟ್ಟು ಖರೀದಿಸುತ್ತಿದ್ದೇವೆ’ ಎನ್ನುತ್ತಾರೆ ನಾಗರಿಕರು.

ಕೆಂಚೇನಹಳ್ಳಿ ಚನ್ನಸಂದ್ರ, ಗೊರಗುಂಟೆಪಾಳ್ಯ ಭಾಗದಲ್ಲಿಯೂ ಒಂದು ವಾರದಿಂದ ಆರು ಸಾವಿರ ಲೀಟರ್ ನೀರಿನ ಟ್ಯಾಂಕ್ ಲೋಡ್ಗೆ ₹600ರಿಂದ ₹800 ವಸೂಲಿ ಮಾಡಲಾಗುತ್ತಿದೆ. ಕೈಗಾರಿಕಾ ಪ್ರದೇಶಗಳು ಮತ್ತು ಹೆಚ್ಚು ಅಪಾರ್ಟ್ಮೆಂಟ್ಗಳಿರುವ ವೈಟ್ಫೀಲ್ಡ್ ಭಾಗದಲ್ಲಿ ಕೆಲವೆಡೆ ಸಾವಿರ ರೂಪಾಯಿ ದಾಟುತ್ತಿದೆ. ಟ್ಯಾಂಕರ್ ನೀರಿಗೆ ಮನಸೋಇಚ್ಛೆ ಹಣ ತೆಗೆದುಕೊಳ್ಳುತ್ತಿದ್ದಾರೆಂಬ ಆರೋಪಗಳೂ ಇವೆ.

ಬೊಮ್ಮನಹಳ್ಳಿ, ವೈಟ್ಫೀಲ್ಡ್ ಸೇರಿದಂತೆ ನಗರದ ಹೊರ ವಲಯದಲ್ಲಿರುವ (110 ಹಳ್ಳಿಗಳ ವ್ಯಾಪ್ತಿಯ) ಬಹಳಷ್ಟು ಅಪಾರ್ಟ್ಮೆಂಟ್ಗಳು ಟ್ಯಾಂಕರ್ ನೀರನ್ನು ಅವಲಂಬಿಸಿವೆ. ಇಂತಹ ಕಡೆ ನಿರಂತರವಾಗಿ ನೀರು ಪೂರೈಕೆ ಮಾಡುವ ಟ್ಯಾಂಕರ್ನವರು ಬೆಲೆ ಹೆಚ್ಚು ಕೇಳುವುದಿಲ್ಲ. ಹೊಸದಾಗಿ ಅಥವಾ ಅಪರೂಪಕ್ಕೊಮ್ಮೆ ನೀರು ತರಿಸಿಕೊಳ್ಳುವವರ ಬಳಿ ಹೆಚ್ಚು ಹಣ ಕೇಳುತ್ತಾರೆ ಎಂದು ರಾಮಮೂರ್ತಿ ನಗರ, ಟಿನ್ ಫ್ಯಾಕ್ಟರಿ, ಕೆ.ಆರ್.ಪುರ ಸುತ್ತಮುತ್ತಲಿನ ನಿವಾಸಿಗಳು ಹೇಳುತ್ತಾರೆ.

‘6000 ಲೀಟರ್ ನೀರು ಖರೀದಿಯ ವೆಚ್ಚ, ಇಂಧನ, ಚಾಲಕರ ವೇತನ, ವಾಹನ ನಿರ್ವಹಣೆಗೆ ಕನಿಷ್ಠ ₹700-₹800 ತಗುಲಲಿದೆ. ಸರ್ಕಾರ ನಿಗದಿಪಡಿಸುವ ದರದಲ್ಲಿ ವ್ಯವಹರಿಸುವುದು ಕಷ್ಟಸಾಧ್ಯ’ ಎನ್ನುತ್ತಾರೆ ಟ್ಯಾಂಕರ್ ಮಾಲೀಕ ಪ್ರಕಾಶ್.

‘ಸುಮಾರು ಇಪ್ಪತ್ತು–ಮೂವತ್ತು ಕಿ.ಮೀ. ದೂರದಿಂದ ನೀರು ತರಬೇಕು. ಇಂಧನ ವೆಚ್ಚ, ನೀರಿಗೆ ತಗಲುವ ವೆಚ್ಚ, ನಮ್ಮ ದುಡಿಮೆ ಎಲ್ಲ ಸೇರಿದರೆ, 5 ಸಾವಿರ ಲೀಟರ್ ನೀರನ್ನು ₹500ರಿಂದ ₹600ಕ್ಕೆ ಮಾರಾಟ ಮಾಡುವುದು ಕಷ್ಟ’ ಎನ್ನುವುದು ಟ್ಯಾಂಕರ್ ಮಾಲೀಕರ ಅಭಿಪ್ರಾಯ.

ಕಳೆದ ವರ್ಷದ ಆದೇಶ ಮುಂದುವರಿಕೆ

2024ರ ಮಾರ್ಚ್ 6ರಂದು ಬೆಂಗಳೂರು ನಗರ ಜಿಲ್ಲಾಡಳಿತ ಖಾಸಗಿ ನೀರಿನ ಟ್ಯಾಂಕರ್ಗಳಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಆ ಪ್ರಕಾರ 5 ಕಿ.ಮೀ. ವ್ಯಾಪ್ತಿವರೆಗೆ 6000 ಲೀಟರ್ ನೀರಿನ ಟ್ಯಾಂಕರ್ಗೆ ₹600 8000 ಲೀಟರ್ಗೆ ₹700 ₹12000 ಲೀಟರ್ಗೆ ₹1000 ಮತ್ತು 5ರಿಂದ 10 ಕಿ.ಮೀ.ವರೆಗೆ ಕಿಮೀ ವ್ಯಾಪ್ತಿಯವರೆಗೆ 6000 ಲೀಟರ್ಗೆ ₹750 ರೂ. 8000 ಲೀಟರ್ ನೀರಿನ ಟ್ಯಾಂಕರ್ಗೆ ₹850 12000 ಲೀಟರ್ಗೆ ₹1200 ನಿಗದಿಪಡಿಸಿ ಆದೇಶಿಸಿದೆ. ಈ ವರ್ಷವೂ ಇದನ್ನೇ ಮುಂದುವರಿಸುವಂತೆ ಈ ವರ್ಷದ ಫೆಬ್ರುವರಿಯಲ್ಲಿ ಜಲಮಂಡಳಿ ಸುತ್ತೋಲೆ ಹೊರಡಿಸಿದೆ. ಆದರೆ ಆ ಸುತ್ತೋಲೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವ ನೀರಿನ ಟ್ಯಾಂಕರ್ಗಳ ವಿರುದ್ಧ ಎಲ್ಲಿಗೆ ದೂರು ಕೋಡಬೇಕು ಎಂಬ ಮಾಹಿತಿ ಇಲ್ಲ. ಹೀಗಾಗಿ ಯಾವುದೇ ನಿಯಂತ್ರಣವಿಲ್ಲದೇ ಟ್ಯಾಂಕರ್ ಮಾಲೀಕರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ನಾಗರಿಕರ ದೂರು.

ಆನ್ಲೈನ್ ನೀರು ಬುಕ್ಕಿಂಗ್

ಏಪ್ರಿಲ್ ಮೊದಲ ವಾರ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಮತ್ತು ಖಾಸಗಿ ಟ್ಯಾಂಕರ್ಗಳು ದುಬಾರಿ ದರ ವಸೂಲಿ ಮಾಡುವುದನ್ನು ನಿಯಂತ್ರಿಸಲು ಬೆಂಗಳೂರು ಜಲಮಂಡಳಿ ‘ಆ್ಯಪ್’ ಆಧಾರಿತ ಟ್ಯಾಂಕರ್ ನೀರು ಖರೀದಿ ವ್ಯವಸ್ಥೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಗ್ರಾಹಕರು ಈ ಮೊಬೈಲ್ ಅಪ್ಲಿಕೇಷನ್ ಮೂಲಕ ನೀರಿನ ಟ್ಯಾಂಕರ್ಗಳನ್ನು ಬುಕ್ ಮಾಡಬಹುದು. ಜಿಲ್ಲಾಡಳಿತ ನಿಗದಿಪಡಿಸಿರುವ ಬೆಲೆಯಲ್ಲಿ ನಿಗದಿತ ಅವಧಿಯಲ್ಲಿ ನೀರು ಪೂರೈಕೆಯಾಗಲಿದೆ. ಶೀಘ್ರದಲ್ಲೇ ಮೊಬೈಲ್ ಅಪ್ಲಿಕೇಷನ್ ಲಿಂಕ್ ಅನ್ನು ಜಲಮಂಡಳಿ ಜಾಲತಾಣದಲ್ಲಿ ಪ್ರಕಟಿಸಲಿದೆ. ‘ನೀರು ಪೂರೈಕೆದಾರರ ವಿವರಗಳನ್ನು ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗುತ್ತಿದೆ. ಏಪ್ರಿಲ್ ಮೊದಲ ವಾರದಿಂದ ಕಾರ್ಯರೂಪಕ್ಕೆ ಬರಲಿದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್ಪ್ರಸಾತ್ ಮನೋಹರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.