ಭಾನುವಾರ, ಮೇ 22, 2022
28 °C
ದೇಶದ 61 ಸ್ಥಳಗಳಿಗೆ ಸಂಪರ್ಕ

ಬೆಂಗಳೂರಿನಿಂದ ಐದು ಹೊಸ ಮಾರ್ಗಗಳಿಗೆ ವಿಮಾನಯಾನ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಈ ತಿಂಗಳ ಕೊನೆಯಲ್ಲಿ ಐದು ಹೊಸ ಮಾರ್ಗಗಳಿಗೆ ವಿಮಾನಯಾನ ಸೇವೆ ಆರಂಭವಾಗಲಿದೆ. ದೇಶದಲ್ಲಿನ ಎರಡನೇ ಹಂತದ ನಗರಗಳಿಗೂ ಸಂಪರ್ಕ ಸಾಧ್ಯವಾಗಲಿದೆ.

ಆಗ್ರಾ, ಕರ್ನೂಲು, ರಾಜಕೋಟ್, ದುರ್ಗಾಪುರ ಮತ್ತು ದಿಬ್ರುಗಡಕ್ಕೆ ಹೊಸದಾಗಿ ವಿಮಾನಗಳು ಸಂಚರಿಸಲಿವೆ. ರಾಜಕೋಟ್‌, ದುರ್ಗಾಪುರಕ್ಕೆ ಸ್ಪೈಸ್‌ಜೆಟ್‌ ಮತ್ತು ದಿಬ್ರುಗಡಕ್ಕೆ ಇಂಡಿಗೊ ವಿಮಾನಗಳು ಈ ತಿಂಗಳ ಕೊನೆಯಲ್ಲಿ ಸಂಚಾರ ಆರಂಭಿಸಲಿವೆ. ಆಗ್ರಾ ಮತ್ತು ಕರ್ನೂಲ್‌ಗೆ ಮಾರ್ಚ್‌ ಮೊದಲ ವಾರದಿಂದ ವಿಮಾನ ಸೇವೆ ಲಭ್ಯವಾಗಲಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್‌) ಹೇಳಿದೆ. ಆ ಮೂಲಕ, ನಗರದಿಂದ ದೇಶದ 61 ಸ್ಥಳಗಳಿಗೆ ವಿಮಾನಯಾನ ಸೇವೆ ಸಿಕ್ಕಂತಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು