ಬೆಂಗಳೂರು: ಸಾಲ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಡಿ.ಆರ್.ನಯನಾ ಬಂಧಿತೆ.

ಸಾರ್ವಜನಿಕರಿಗೆ ₹12.20 ಲಕ್ಷ ವಂಚಿಸಿದ್ದ ಆರೋಪದ ಅಡಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸುಬ್ಬಲಕ್ಷ್ಮಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಶೇ 1ರ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ಆರೋಪಿ ನಂಬಿಸುತ್ತಿದ್ದರು. ₹ 10 ಲಕ್ಷ ಸಾಲದ ಹಣಕ್ಕೆ ಮುಂಗಡವಾಗಿ ಮೂರು ತಿಂಗಳ ಇಎಂಐ ಅನ್ನು ₹30 ಸಾವಿರದಂತೆ 15 ಮಂದಿಯಿಂದ ಪಡೆದುಕೊಂಡಿದ್ದರು. ಅಲ್ಲದೇ ಸಾಲವನ್ನೂ ನೀಡಿರಲಿಲ್ಲ. ಸಾರ್ವಜನಿಕರಿಂದ ಮುಂಗಡವಾಗಿ ಕಡಿತ ಮಾಡಿಕೊಂಡಿದ್ದ ₹ 12.22 ಲಕ್ಷವನ್ನೂ ಮರುಪಾವತಿ ಮಾಡದೇ ವಂಚಿಸಿದ್ದರು. ಆರೋಪಿ ವಿರುದ್ಧ ಬಸವೇಶ್ವರನಗರ ಹಾಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದರು.

ಆರೋಪಿಯಿಂದ ವಂಚನೆಗೆ ಒಳಗಾದವರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬವರು. ಈ ರೀತಿ ಆಮಿಷವೊಡ್ಡಿ ವಂಚನೆ ನಡೆಸುವವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.