ಬೆಂಗಳೂರು: ಆಟೊ ಬುಕ್ ಮಾಡಿ ರದ್ದುಪಡಿಸಿದ ವಿಚಾರವಾಗಿ ಯುವತಿಗೆ ಅವಾಚ್ಯ ಶಬ್ದದಿಂದ ನಿಂದಿಸಿ, ಹಲ್ಲೆ ನಡೆಸಲು ಯತ್ನಿಸಿದ್ದ ಚಾಲಕನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪವನ್ ಬಂಧಿತ ಆರೋಪಿ. ಯುವತಿ ಜೊತೆಗೆ ಚಾಲಕ ಗಲಾಟೆ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಅಕ್ಟೋಬರ್ 2ರಂದು ಸಂಜೆ 7.30ರ ಸುಮಾರಿಗೆ ಯುವತಿ ಕ್ಯಾಲಸನಹಳ್ಳಿಯಿಂದ ಬಾಣಸವಾಡಿಗೆ ಹೋಗಲು ಆಟೊ ಬುಕ್ ಮಾಡಿದ್ದರು. ಸಮಯಕ್ಕೆ ಸರಿಯಾಗಿ ಆಟೊ ಬಾರದ ಕಾರಣ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಆಟೊವನ್ನು ಹತ್ತಿದ್ದರು. ಮೊದಲು ಬುಕ್ ಮಾಡಿದ್ದ ಆಟೊವನ್ನು ರದ್ದು ಪಡಿಸಿದ್ದರು. ಅದೇ ವೇಳೆಗೆ ಸ್ಥಳಕ್ಕೆ ಬಂದಿದ್ದ ಆಟೊ ಚಾಲಕ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಯತ್ನಿಸಿದ್ದ ಎನ್ನಲಾಗಿದೆ. ಘಟನೆ ಸಂಬಂಧ ಯುವತಿ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆಟೊ ಚಾಲಕನನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.