ಮಂಗಳವಾರ, ಸೆಪ್ಟೆಂಬರ್ 28, 2021
21 °C

ಹೊಸ ಆರು ಮಾರ್ಗಗಳಲ್ಲಿ ಬಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ಆರು ಮಾರ್ಗಗಳಲ್ಲಿ ಬಸ್‌ಗಳ ಕಾರ್ಯಾಚರಣೆಯನ್ನು ಬಿಎಂಟಿಸಿ ಆರಂಭಿಸಿದೆ.

ಕೆಂಗೇರಿ ಟಿಟಿಎಂಸಿಯಿಂದ ಜಾಲಹಳ್ಳಿ ಕ್ರಾಸ್, ಜಾಲಹಳ್ಳಿ ಕ್ರಾಸ್‌ನಿಂದ ರಾಜಗೋಪಾಲನಗರ– ಕಂಠೀರವ ಸ್ಟುಡಿಯೋ ಮಾರ್ಗದಲ್ಲಿ ಜಾಲಹಳ್ಳಿ ಕ್ರಾಸ್, ಜಾಲಹಳ್ಳಿ ಮೆಟ್ರೊ ರೈಲು ನಿಲ್ದಾಣದಿಂದ ಲಗ್ಗೆರೆ, ಶ್ರೀನಗರದಿಂದ ಸುಂಕದಕಟ್ಟೆ ಮಾರ್ಗದಲ್ಲಿ ಜಾಲಹಳ್ಳಿ ಕ್ರಾಸ್, ಕೆ.ಆರ್.ಪುರದಿಂದ ದೊಮ್ಮಲೂರು ಟಿಟಿಎಂಸಿ, ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಬೊಮ್ಮನಹಳ್ಳಿ–ಹೊಂಗಸಂದ್ರ– ಬೇಗೂರು ಮಾರ್ಗದಲ್ಲಿ ಬನ್ನೇರುಘಟ್ಟ ಸರ್ಕಲ್ ತನಕ ಹೊಸ ಮಾರ್ಗಗಳಲ್ಲಿ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.

ಒಟ್ಟು 20 ಬಸ್‌ಗಳು 223 ಸುತ್ತುವಳಿ ಸಂಚರಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು