ಗುರುವಾರ , ಮೇ 26, 2022
30 °C
ಕೆಎಸ್‌ಎಂಡಿಎಂಸಿ–ಅಂಚೆ ಇಲಾಖೆ ಸಹಯೋಗದಲ್ಲಿ ಪೂರೈಕೆ

ಇದೇ 26ರಿಂದ ಮಾವುಪ್ರಿಯರ ಮನೆ ಬಾಗಿಲಿಗೆ ವಿವಿಧ ತಳಿಯ ಮಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು  ಮಾರುಕಟ್ಟೆ ನಿಗಮವು (ಕೆಎಸ್‌ಎಂಡಿಎಂಸಿ) ಅಂಚೆ ಇಲಾಖೆ ಸಹಯೋಗದಲ್ಲಿ ಇದೇ 26ರಿಂದ ಮಾವುಪ್ರಿಯರ ಮನೆ ಬಾಗಿಲಿಗೆ ವಿವಿಧ ತಳಿಯ ಮಾವು ತಲುಪಿಸಲಿದೆ. 

ಗ್ರಾಹಕರಿಗಾಗಿ ಈಗಾಗಲೇ ಆನ್‌ ಲೈನ್‌ ಸೇವೆ ಆರಂಭಿಸಿರುವ ನಿಗಮವು ನೆಚ್ಚಿನ ಮಾವು ಖರೀದಿಸಲು ಆನ್‍ಲೈನ್ ಬುಕಿಂಗ್‌ ಸೇವೆಗೂ ಅವಕಾಶ ಕಲ್ಪಿಸಿದೆ.

ಮಾವು ಮಾರಾಟ ಪೋರ್ಟಲ್ https://karsirimangoes.karnataka.gov.inಗೆ ಲಾಗಿನ್ ಆಗಿ ತಮಗೆ ಬೇಕಾದ ಮಾವಿನ ಹಣ್ಣಿನ ತಳಿ ಹಾಗೂ ಖರೀದಿಸುವ ಪ್ರಮಾಣವನ್ನು ತಿಳಿಸಬಹುದು. ತಮ್ಮ ವಿಳಾಸ, ಗ್ರಾಹಕರ ಮೊಬೈಲ್ ಸಂಖ್ಯೆ ನಮೂದಿಸಬೇಕು.

‘ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಮಾವು ತಲುಪಿಸಲು ಈ ಸಲವೂ ಸೇವೆ ಆರಂಭಿಸಿದ್ದೇವೆ. ಇದೇ 26ರಿಂದ ಮಾವು ಗ್ರಾಹಕರ ಕೈಸೇರಲಿದೆ’ ಎಂದು ಕೆಎಸ್‌ಎಂಡಿಎಂಸಿ ಅಧ್ಯಕ್ಷ ಕೆ.ವಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು