ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಗುದ್ದಿ ಬಾಲಕ ಸಾವು: ಚಾಲಕನಿಗೆ 3 ವರ್ಷ ಜೈಲು

Published 28 ಡಿಸೆಂಬರ್ 2023, 19:56 IST
Last Updated 28 ಡಿಸೆಂಬರ್ 2023, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಪಘಾತವನ್ನುಂಟು ಮಾಡಿ ಬಾಲಕ ಬರೂನ್ (12) ಸಾವಿಗೆ ಕಾರಣವಾಗಿದ್ದ ಅಪರಾಧಿ ಸುರೇಶ್‌ನಿಗೆ (24) ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ 1ನೇ ಎಂಎಂಟಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

‘2017ರಲ್ಲಿ ಬಾಬುಸಾಪಾಳ್ಯ ಸರ್ವೀಸ್ ರಸ್ತೆಯಲ್ಲಿ ಆರೋಪಿ ಸುರೇಶ್ ಕಾರು ಚಲಾಯಿಸಿಕೊಂಡು ಹೊರಟಿದ್ದ. ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಬಾಲಕರಾದ ಬರೂನ್‌ ಹಾಗೂ ಹೇಮಂತ್‌ಗೆ ಕಾರು ಡಿಕ್ಕಿ ಹೊಡೆದಿತ್ತು. ಬರೂನ್ ಮೃತಪಟ್ಟಿದ್ದ. ಹೇಮಂತ್ ಗಾಯಗೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಚಾಲಕ ಸುರೇಶ್‌ನನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗೆ 3 ವರ್ಷ ಶಿಕ್ಷೆ ಜೊತೆಯಲ್ಲಿ ₹ 2 ಲಕ್ಷ ದಂಡ ವಿಧಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT