ಬೆಂಗಳೂರು: ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆಯ ಅಂಗವಾಗಿ ಎಚ್ಸಿಜಿ ಕ್ಯಾನ್ಸರ್ ಸೆಂಟರ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬ್ರೇಕ್ ಫಾರ್ ಬ್ರೆಸ್ಟ್ ಕ್ಯಾನ್ಸರ್’ ಬೈಕಥಾನ್ನಲ್ಲಿ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮತ್ತು ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಬೈಕಥಾನ್ನಲ್ಲಿ 300ಕ್ಕೂ ಅಧಿಕ ಮಹಿಳಾ ಬೈಕರ್ಗಳು ಪಾಲ್ಗೊಂಡಿದ್ದರು. ಈ ಅಭಿಯಾನದ ಭಾಗವಾಗಿ ಪಾಲ್ಗೊಂಡಿದ್ದ ಎಲ್ಲ ಮಹಿಳಾ ಬೈಕರ್ಗಳಿಗೆ ಉಚಿತ ಸ್ತನ ಪರೀಕ್ಷೆ ಮತ್ತು ಮ್ಯಾಮೋಗ್ರಾಮ್ ಸೌಲಭ್ಯವನ್ನು ಕಲ್ಪಿಸಲಾಗಿತ್ತು.

‘ನಗರೀಕರಣ, ಬದಲಾದ ಜೀವನಶೈಲಿ ಮತ್ತು ರೋಗ ಪತ್ತೆಯಲ್ಲಿನ ವಿಳಂಬದಿಂದಾಗಿ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅತಿ ಸಾಮಾನ್ಯವಾದ ಕಾಯಿಲೆಯಾಗಿದೆ’ ಎಂದು ಸೆಂಟರ್ನ ಕ್ಯಾನ್ಸರ್ ತಜ್ಞರು ಅಭಿಪ್ರಾಯಪಟ್ಟರು.

ಮೆಡಿಕಲ್ ಅಂಕಾಲಜಿ ವಿಭಾಗದ ಸಲಹೆಗಾರ್ತಿ ಡಾ. ಸ್ಮಿತಾ ಸಲ್ಡಾನಾ, ‘ಜಗತ್ತಿನಲ್ಲಿ ಪ್ರತಿ 60 ಸೆಕೆಂಡ್ಗೆ ನಾಲ್ವರು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಒಬ್ಬರು ಈ ರೋಗದಿಂದ ಮೃತಪಡುತ್ತಿದ್ದಾರೆ. ನಿಯಮಿತವಾಗಿ ಸ್ವಯಂ ಪರೀಕ್ಷೆ, ಸಕಾಲಿಕ ತಪಾಸಣೆ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಕೆಯಿಂದ ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು’ ಎಂದು ಹೇಳಿದರು.

ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ನ ಕರ್ನಾಟಕ ವಿಭಾಗದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಮನೀಷಾ ಕುಮಾರ್, ‘ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ ಜೀವ ಉಳಿಸಬಹುದು. ಬೈಕಥಾನ್ನಂತಹ ಜಾಗೃತಿ ಅಭಿಯಾನವು ನಗರದ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.