ಬೆಂಗಳೂರು:ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ನಗರದಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ಶನಿವಾರವೂ ಹಲವೆಡೆ ಹೋರಾಟಗಳು ನಡೆದವು.

ಶಾಸಕ ಜಿಗ್ನೇಶ್ ಮೇವಾನಿ, ನಟ ನಾಸಿರುದ್ದೀನ್ ಶಾ, ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಹಲವರು ಪ್ರತ್ಯೇಕವಾಗಿ ಬೇರೆ ಬೇರೆ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

‘ದಮನಿತ ಸಮುದಾಯಗಳ ಮೇಲೆ ಎನ್‌ಪಿಆರ್–ಎನ್‌ಆರ್‌ಸಿ ದುಷ್ಪರಿಣಾಮ’ ಕುರಿತು ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಪಾಲ್ಗೊಂಡಿದ್ದ ಜಿಗ್ನೇಶ್ ಮೇವಾನಿ, ‘ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾನೂನುಗಳು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸಮಸ್ಯೆಯಾಗಿಲ್ಲ. ದಲಿತರು, ಅನಕ್ಷರಸ್ಥರು, ಅಲೆಮಾರಿಗಳು, ಬುಡಕಟ್ಟು ಜನಾಂಗದವರು, ಮಹಿಳೆಯರು ಸೇರಿದಂತೆ ಎಲ್ಲ ಧರ್ಮದ ಶೋಷಿತರ ಸಮಸ್ಯೆಯಾಗಿದೆ’ ಎಂದು ಹೇಳಿದರು.

‘ದೇಶದ ಬಡವರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಿ, ಅವರಿಂದ ಬಿಟ್ಟಿ ಚಾಕರಿ ಮಾಡಿಸುವುದಕ್ಕಾಗಿಯೇ ಕೇಂದ್ರ ಸರ್ಕಾರ ಇಂಥ ಕಾನೂನುಗಳನ್ನು ಜಾರಿಗೆ ತಂದಿದೆ. ಇದರ ವಿರುದ್ಧ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಹೋರಾಟ
ದಲ್ಲಿ ಪಾಲ್ಗೊಳ್ಳುವ ವೈದ್ಯರು, ಶಿಕ್ಷಕರು ಹಾಗೂ ಇತರರನ್ನು ಜೈಲಿಗೆ ಹಾಕಲಾಗುತ್ತಿದೆ. ದೇಶದ ಹಿತಕ್ಕಾಗಿ ನಾನೂ ಜೈಲಿಗೆ ಹೋಗಲು ಸಿದ್ಧ’ ಎಂದರು.

‘ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ದೇಶದಲ್ಲಿ ನಿರಾಶ್ರಿತರ ಶಿಬಿರ ಸ್ಥಾಪಿಸಿದರೆ, ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಬಹುಜನತೆ ದೇಶದಾದ್ಯಂತ ಶಾಹೀನ್ ಬಾಗ್‌ಗಳನ್ನು ನಿರ್ಮಿಸುತ್ತಿದ್ದಾರೆ’ ಎಂದು ಹೇಳಿದರು.

ಇತ್ತೀಚೆಗೆ ತುಂಬರನಹಳ್ಳಿಯಲ್ಲಿ ಬಡ ಕಾರ್ಮಿಕರ ಜೋಪಡಿಗಳನ್ನು ನೆಲಸಮ ಮಾಡಿದ ದುಷ್ಕರ್ಮಿಗಳ ಕೃತ್ಯವನ್ನೂ ಜಿಗ್ನೇಶ್ ಖಂಡಿಸಿದರು.

ಸಿನಿಮಾ, ನಾಟಕ ಪ್ರದರ್ಶನ: ‘ಸಿವಿಲ್ ಲಿಬರ್ಟೀಸ್ ಕಲೆಕ್ಟಿವ್’ ಸಂಘಟನೆ ಪದಾಧಿಕಾರಿಗಳು, ಸಿನಿಮಾ ಹಾಗೂ ನಾಟಕ ಪ್ರದರ್ಶನ ಹಮ್ಮಿಕೊಳ್ಳುವ ಮೂಲಕಕಾಯ್ದೆಯನ್ನು ವಿರೋಧಿಸಿದರು. ಸಂಗೀತ ಕಾರ್ಯಕ್ರಮನ್ನೂ ಆಯೋಜಿಸಿದ್ದರು. ಪ್ರತಿಭಟನೆಯಲ್ಲಿ ಜಿಗ್ನೇಶ್ ಮೇವಾನಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.