ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ಕಾರ್ ರೆಂಟಲ್’ ಆ್ಯಪ್ ಬಿಡುಗಡೆ

Published 24 ಮೇ 2024, 16:31 IST
Last Updated 24 ಮೇ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ‘ಇ ಟ್ರ್ಯಾವೆಲ್‌ ಮೇಟ್’ ಸಂಸ್ಥೆಯ ‘ಕಾರ್ ರೆಂಟಲ್’ ಆ್ಯಪ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಗೌರಗದ್ದೆ ಆಶ್ರಮದ ವಿನಯ್ ಗುರೂಜಿ ಲೋಕಾರ್ಪಣೆ ಮಾಡಿದರು.

ರೆಂಟ್‌ ಎನ್‌ ಗೋ ಕಂಪನಿ ಅಭಿವೃದ್ಧಿಪಡಿಸಿರುವ ಆ್ಯಪ್‌ ಬಿಡುಗಡೆ ಮೂಲಕ ಈ ಟ್ರ್ಯಾವೆಲ್ ಮೇಟ್‌ ಸಂಸ್ಥೆ ನಗರದಲ್ಲಿ ಕಾರು ಬಾಡಿಗೆ ಸೇವೆ ಆರಂಭಿಸಿತು. ಈ ಆ್ಯಪ್‌ ಸದ್ಯ ಸೇವೆ ನೀಡುತ್ತಿರುವ ಕಂಪನಿಗಳಿಗಿಂತ ಹೆಚ್ಚು ಸರಳ ಮತ್ತು ಸುರಕ್ಷಿತವಾಗಿದೆ ಎಂದು ಸಂಸ್ಥೆಯವರು ತಿಳಿಸಿದರು. ‌

ವಿನಯ್‌ ಗುರೂಜಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಾರಿಗೆ ಉದ್ಯಮದಲ್ಲಿರುವ ‘ಇ–ಟ್ರ್ಯಾವೆಲ್ ಮೇಟ್’ ಕಂಪನಿಯ ಹೊಸ ಸೇವೆ ಇದಾಗಿದ್ದು, ಇದು ಅತ್ಯಂತ ಗ್ರಾಹಕ-ಸ್ನೇಹಿಯಾಗಿದೆ’ ಎಂದು ಹೇಳಿದರು.

ಬೆಂಗಳೂರಿನ ತೀವ್ರ ಒತ್ತಡದ ಸಂಚಾರ ದಟ್ಟಣೆಗೆ ಈ ಆ್ಯಪ್ ಪರಿಹಾರ ನೀಡುವಲ್ಲಿ ಮಹತ್ವದ ಹೆಜ್ಜೆ ಇಡಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT